Home » ಆನ್ಲೈನ್ ನಲ್ಲಿ ಬುಕ್ ಮಾಡಿದ್ದು ವಾಚ್ ಆದರೆ ಡೆಲಿವರಿ ಆದದ್ದು ಕಾಂಡೋಮ್ !!!|ಶಾಕ್ ಗೊಳಗಾದ ಗ್ರಾಹಕ ಮಾಡಿದ್ದೇನು ?

ಆನ್ಲೈನ್ ನಲ್ಲಿ ಬುಕ್ ಮಾಡಿದ್ದು ವಾಚ್ ಆದರೆ ಡೆಲಿವರಿ ಆದದ್ದು ಕಾಂಡೋಮ್ !!!|ಶಾಕ್ ಗೊಳಗಾದ ಗ್ರಾಹಕ ಮಾಡಿದ್ದೇನು ?

0 comments

ಇದೀಗ ಎಲ್ಲವೂ ಆನ್ಲೈನ್ ಮಯವಾಗಿರುವುದರಿಂದ ಗ್ರಾಹಕರು ಮೊಬೈಲ್ ಇಲ್ಲವೇ ಕಂಪ್ಯೂಟರ್ ನಲ್ಲಿ ಬುಕ್ ಮಾಡಿ ಮನೆಗೆ ಬೇಕಾದ ಎಲ್ಲಾ‌ ಬಗೆಯ ಸಾಮಾನುಗಳನ್ನು ಆನ್ಲೈನ್ ಮೂಲಕನೇ ತರಿಸಿ ಕೊಳ್ಳಬಹುದು. ಈ ಆನ್ಲೈನ್ ನಿಂದ ನಮಗೆ ಎಷ್ಟು ಉಪಯೋಗ ಇದೆಯೋ ಕೆಲವೊಮ್ಮೆ ನಮಗೆ ಅದರಿಂದನೇ ಮೋಸ ಹೋಗುವುದು ಇರುತ್ತದೆ. ಇತ್ತೀಚೆಗೆ ಆನ್ಲೈನ್ ನಲ್ಲಿ ಬುಕ್ ಮಾಡಿದ ಪ್ರಾಡೆಕ್ಟ್ ನಮ್ಮ ಕೈ ಸೇರುವಾಗ ಬೇರೆಯದೇ ಆಗಿರುತ್ತದೆ. ಇಂತಹ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಈಗ ಅಂಥದ್ದೇ ಒಂದು ಪ್ರಕರಣ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ.

ಥಟ್ಟಂಪಾಡಿ ನಿವಾಸಿ ಅನಿಲ್ ಕುಮಾರ್ ಎಂಬುವವರು ಪ್ರಮುಖ ಇ ಕಾಮರ್ಸ್ ಕಂಪನಿಯಲ್ಲಿ 2,200 ರೂಪಾಯಿ ಬೆಲೆಬಾಳುವ ವಾಚ್ ನ್ನು ಬುಕ್ ಮಾಡಿದ್ದಾರೆ.

ಶನಿವಾರ ಮಧ್ಯಾಹ್ನ ಇಬ್ಬರು ಡೆಲಿವರಿ ಏಜೆಂಟ್ ಗಳು ಅನಿಲ್ ಕುಮಾರ್ ಅವರ ಮನೆಗೆ ಬಂದು ವಾಚ್ ಡೆಲಿವರಿ ಮಾಡಿದ್ದಾರೆ. ಆದರೆ ಪ್ಯಾಕೇಜ್ ತೂಕ ಜಾಸ್ತಿ ಇರುವುದನ್ನು ಕಂಡ ಅನಿಲ್ ತತ್ ಕ್ಷಣವೇ ಅದನ್ನು ತೆಗೆದು ನೋಡಿದ್ದಾರೆ. ಅದರಲ್ಲಿ ವಾಚ್ ಬದಲಾಗಿ ಕಾಂಡೋಮ್ ಹಾಗೂ ಇತರ ವಸ್ತುಗಳು ಇದ್ದವು. ಇದರಿಂದ ಶಾಕ್ ಗೊಳಗಾದ ಅನಿಲ್ ಅವರು ತಕ್ಷಣವೇ ಏಜೆಂಟ್ ಅವರನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಇಬ್ಬರು ಡೆಲಿವರಿ ಬಾಯ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದು ಕಂಪನಿ ಮಾಡಿದ ಎಡವಟ್ಟಾ ಅಥವಾ ಬೇರೆ ಯಾರದ್ದು ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ.

You may also like

Leave a Comment