Home » ಮುಸ್ಲಿಂ ವ್ಯಕ್ತಿಯೊಂದಿಗೆ ಹಿಂದು ವಿವಾಹಿತೆ ರೈಲಿನಲ್ಲಿ ಪ್ರಯಾಣ | ಇಬ್ಬರನ್ನು ಹಿಡಿದು ಪೊಲೀಸ್ ಠಾಣೆಗೆ ಎಳೆದೊಯ್ದ ಬಜರಂಗದಳದ ಕಾರ್ಯಕರ್ತರು

ಮುಸ್ಲಿಂ ವ್ಯಕ್ತಿಯೊಂದಿಗೆ ಹಿಂದು ವಿವಾಹಿತೆ ರೈಲಿನಲ್ಲಿ ಪ್ರಯಾಣ | ಇಬ್ಬರನ್ನು ಹಿಡಿದು ಪೊಲೀಸ್ ಠಾಣೆಗೆ ಎಳೆದೊಯ್ದ ಬಜರಂಗದಳದ ಕಾರ್ಯಕರ್ತರು

0 comments

ಮುಸ್ಲಿಂ ವ್ಯಕ್ತಿ ಹಾಗೂ ಹಿಂದೂ ವಿವಾಹಿತೆ ರೈಲಿನಲ್ಲಿ ಜೊತೆಗೆ ಪ್ರಯಾಣಿಸುತ್ತಿದ್ದದ್ದನ್ನು ಕಂಡ ಬಜರಂಗದಳದ ಸದಸ್ಯರು ಉಜ್ಜಯಿನಿ ರೈಲ್ವೆ ಪೊಲೀಸ್ ಠಾಣೆಗೆ ಎಳೆದೊಯ್ದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮುಸ್ಲಿಂ ವ್ಯಕ್ತಿ ಮತ್ತು ಹಿಂದೂ ಮಹಿಳೆ ರೈಲಿನಲ್ಲಿ ಜೊತೆಯಾಗಿ ಪ್ರಯಾಣಿಸಿದ್ದಾರೆ. ಇದು ಲವ್ ಜಿಹಾದ್ ಎಂದು ಭಜರಂಗದಳದ ಸದಸ್ಯರು ಆರೋಪಿಸಿದ್ದಾರೆ. ನಂತರ ಮುಸ್ಲಿಂ ವ್ಯಕ್ತಿಯನ್ನು ರೈಲಿನಿಂದ ಕೆಳಗಿಳಿಸಿ ಹಲ್ಲೆ ನಡೆಸಿ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇಂದೋರ್‌ನ ಈ ಇಬ್ಬರು ಪ್ರಯಾಣಿಕರು ಮತ್ತು ಕುಟುಂಬದ ಸ್ನೇಹಿತರನ್ನು ಸರ್ಕಾರಿ ರೈಲ್ವೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇವರಿಬ್ಬರ ಪೋಷಕರು ಬರುವವರೆಗೂ ಪೊಲೀಸ್ ಠಾಣೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದಾರೆ. ನಂತರ ಅವರ ಹೇಳಿಕೆಗಳನ್ನು ದಾಖಲಿಸಿ ಪೊಲೀಸರು ಇಬ್ಬರನ್ನು ಬಿಡುಗಡೆ ಮಾಡಿ ಕಳುಹಿಸಿದ್ದಾರೆ.

ಈ ಘಟನೆ ಜ.14ರಂದು ನಡೆದಿದೆ ಎಂದು ಹೇಳಲಾಗುತ್ತಿದೆ. ಮುಸ್ಲಿಂ ವ್ಯಕ್ತಿ ಆಸಿಫ್ ಶೇಖ್ ಎಂದು ಗುರುತಿಸಲಾಗಿದ್ದು, ಈತ ಎಲೆಕ್ಟ್ರಾನಿಕ್ ಅಂಗಡಿಯೊಂದರ ಮಾಲೀಕ. ಮಹಿಳೆ ಖಾಸಗಿ ಶಾಲೆಯೊಂದರ ಶಿಕ್ಷಕಿಯಾಗಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment