Home » ಕಿರಾತಕ ಖ್ಯಾತಿಯ ಕನ್ನಡ ಚಿತ್ರ ನಿರ್ದೇಶಕ ಪ್ರದೀಪ್ ರಾಜ್ ಕೋವಿಡ್‌ಗೆ ಬಲಿ

ಕಿರಾತಕ ಖ್ಯಾತಿಯ ಕನ್ನಡ ಚಿತ್ರ ನಿರ್ದೇಶಕ ಪ್ರದೀಪ್ ರಾಜ್ ಕೋವಿಡ್‌ಗೆ ಬಲಿ

by Praveen Chennavara
0 comments

ಬೆಂಗಳೂರು : ಕಿರಾತಕ, ಅಂಜದಗಂಡು ಸೇರಿದಂತೆ ಹಲವು ಸಿನಿಮಾಗಳ ನಿರ್ದೇಶನ ಮಾಡಿದ್ದ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪ್ರದೀಪ್ ರಾಜ್ ಇಂದು ನಿಧನರಾಗಿದ್ದಾರೆ.

ಪ್ರದೀಪ್ ರಾಜ್ ಅವರು ಅನಾರೋಗ್ಯದಿಂದ ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.

ಬೆಂಗಳೂರು 23, ಕಿರಾತಕ, ಅಂಜದ ಗಂಡು, ಮಿಸ್ಟರ್ 420 ಸೇರಿದಂತೆ ಹಲವು ಸಿನಿಮಾಗಳನ್ನು ಪ್ರದೀಪ್ ರಾಜ್ ನಿರ್ದೇಶನ ಮಾಡಿದ್ದಾರೆ.

ಪ್ರದೀಪ್ ರಾಜ್ ಮೂಲತಃ ಪಾಂಡಿಚೇರಿಯವರಾಗಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪತ್ನಿ ಶಾಲಿನಿ ಗೃಹಿಣಿ. ಹಿರಿ ಮಹ ಬಿಟೆಕ್ ವಿದ್ಯಾರ್ಥಿ. ಕಿರಿಯ ಪುತ್ರ ಅನಿರುದ್ಧ್ ಒಂಭತ್ತನೇ ತರಗತಿ ವಿದ್ಯಾರ್ಥಿ.

ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ ಮೂರು ಗಂಟೆಗೆ ಪಾಂಡಿಚೇರಿಯಲ್ಲಿ ನೆರವೇರಲಿದೆ.

You may also like

Leave a Comment