Home » ಲಕ್ಷ್ಮೀ ಮಾರಾಟಕ್ಕಿದೆ ಎಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಲಕ್ಷ್ಮೀ ಮಾರಾಟಕ್ಕಿದೆ ಎಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ

by Praveen Chennavara
0 comments

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬೆಂಗಳೂರಿನ ಸದಾಶಿವನಗರದಲ್ಲಿರುವ ಬಂಗಲೆ `ಲಕ್ಷ್ಮೀ’ ಮಾರಾಟ ಮಾಡಲು ಮುಂದಾಗಿದ್ದಾರೆ.

ಸದಾಶಿವನಗರದಲ್ಲಿ ಉದ್ಯಮಿ ರವಿ ಅವರಿಂದ ಖರೀದಿಸಿದ್ದ ಬಂಗಲೆಯನ್ನು ರಮೇಶ್ ಜಾರಕಿಹೊಳಿ ಮಾರಲು ನಿರ್ಧರಿಸಿದ್ದು, ಇದರ ಬೆಲೆ 40 ಕೋಟಿ ರೂ.ಬೆಲೆಯ ಈ ಹೊಸ ಮನೆಗೆ ಬಂದ ಮೇಲೆ ಪದೇ ಪದೇ ರಮೇಶ್ ಜಾರಕಿಹೊಳಿ ಸಂಕಷ್ಟಕ್ಕೀಡಾಗುತ್ತಿದ್ದಾರೆ.

ಅದರಲ್ಲೂ ಸಿಡಿ ಪ್ರಕರಣದಿಂದ ಸಚಿವ ಸ್ಥಾನ ಕಳೆದುಕೊಂಡಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ.

ಡಿಕೆ ಶಿವಕುಮಾರ್ ಮೇಲೆ ಪೈಪೋಟಿಗೆ ಬಿದ್ದು ಅವರ ಮನೆ ಹಿಂಭಾಗದಲ್ಲೇ ಸದಾಶಿವನಗರದಲ್ಲಿ ಬಂಗಲೆಯನ್ನು ಜಾರಕಿಹೊಳಿ ಖರೀದಿಸಿದ್ದರು.

You may also like

Leave a Comment