Home » ಮೊದಲ ಸರ್ಜರಿ ನಡೆಸಿ ಇನ್ನೊಂದು ಸರ್ಜರಿಗೆ ತಯಾರಾಗುತ್ತಿರುವಾಗ ಹೃದಯಾಘಾತ!! ಕುಸಿದು ಬಿದ್ದು ಮೃತಪಟ್ಟ ಮಣಿಪಾಲ್ ಆಸ್ಪತ್ರೆಯ ಖ್ಯಾತ ನ್ಯೂರೋ ಸರ್ಜನ್ ಡಾ|ವೇಣುಗೋಪಾಲ್

ಮೊದಲ ಸರ್ಜರಿ ನಡೆಸಿ ಇನ್ನೊಂದು ಸರ್ಜರಿಗೆ ತಯಾರಾಗುತ್ತಿರುವಾಗ ಹೃದಯಾಘಾತ!! ಕುಸಿದು ಬಿದ್ದು ಮೃತಪಟ್ಟ ಮಣಿಪಾಲ್ ಆಸ್ಪತ್ರೆಯ ಖ್ಯಾತ ನ್ಯೂರೋ ಸರ್ಜನ್ ಡಾ|ವೇಣುಗೋಪಾಲ್

0 comments

ಇತ್ತೀಚೆಗೆ ಕೋವಿಡ್ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡು ಕರ್ತವ್ಯದಲ್ಲಿದ್ದ ವೈದ್ಯರೊಬ್ಬರು ಮೊದಲ ಸರ್ಜರಿ ಮುಗಿಸಿ, ಎರಡನೇ ಸರ್ಜರಿಗೆ ಸಿದ್ಧರಾಗುತ್ತಿದ್ದ ವೇಳೆ ಹೃದಯಾಘಾತಗೊಂಡು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ಖ್ಯಾತ ನ್ಯೂರೋ ಸರ್ಜನ್ ಆಗಿದ್ದ ಡಾ. ವೇಣುಗೋಪಾಲ್ ಅವರು ಮೃತಪಟ್ಟ ದುರ್ದೈವಿ. ತಾನು ಕರ್ತವ್ಯದಲ್ಲಿದ್ದಾಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಯೋರ್ವರಿಗೆ ಸರ್ಜರಿ ನಡೆಸಿ, ಇನ್ನೊಂದು ಸರ್ಜರಿಗೆ ತಯಾರಾಗುತ್ತಿದ್ದ ವೇಳೆ ಹೃದಯಾಘಾತಗೊಂಡು ಅಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸಾ ಘಟಕಕ್ಕೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

You may also like

Leave a Comment