Home » ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಟ್ರಕ್

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಟ್ರಕ್

0 comments

ಮಂಗಳೂರು: NH 66 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಟ್ರಕ್ ರಸ್ತೆ ಬದಿಯ ಕಂದಕಕ್ಕೆ ಬಿದ್ದಿರುವ ಘಟನೆ ನಡೆದಿದೆ.

ತೊಕ್ಕೊಟ್ಟು ಸಮೀಪದ ಕಾಪಿಕಾಡ್ ಎಂಬಲ್ಲಿ ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ. ಸಾಂದರ್ಭಿಕ ಸಾಕ್ಷ್ಯಗಳ ಪ್ರಕಾರ ಕಾರು ಚಾಲಕನ ನಿರ್ಲಕ್ಷ್ಯವು ಅಪಘಾತಕ್ಕೆ ಕಾರಣವಾಗಿದೆ.ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾರ್ ಡ್ರೈವರ್ ಯಾವುದೇ ಸಿಗ್ನಲ್ ನೀಡದೆ ಎಡಕ್ಕೆ ತಿರುವು ತೆಗೆದುಕೊಂಡಿದ್ದರಿಂದ ಕಂಟೈನರ್ ಟ್ರಕ್ ಚಾಲಕ ತನ್ನ ವಾಹನದ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ.

ಕಂಟೈನರ್ ಟ್ರಕ್ ಮುಂಬೈನಿಂದ ಕಾಸರಗೋಡಿಗೆ ಹುಂಡೈ ಕಾರುಗಳನ್ನು ಸಾಗಿಸುತ್ತಿತ್ತು.ನಾಗುರಿ ಟ್ರಾಫಿಕ್ ಪೋಲೀಸ್ ಸ್ಟೇಷನ್ ವ್ಯವಸ್ಥೆ ಮಾಡಿದ ಕ್ರೇನ್ ಮೂಲಕ ಟ್ರಕ್ ಅನ್ನು ಮೇಲೆತ್ತುವವರೆಗೂ NH 66 ನಲ್ಲಿ ಟ್ರಾಫಿಕ್
ಮೇಲೆ ಪರಿಣಾಮ ಬೀರಿದೆ.

You may also like

Leave a Comment