Home » ಅಬ್ಬಬ್ಬಾ….! ಮೃತ ವ್ಯಕ್ತಿಯ ದೇಹದ ಪಕ್ಕ 124 ಹಾವುಗಳು ಪತ್ತೆ

ಅಬ್ಬಬ್ಬಾ….! ಮೃತ ವ್ಯಕ್ತಿಯ ದೇಹದ ಪಕ್ಕ 124 ಹಾವುಗಳು ಪತ್ತೆ

by Praveen Chennavara
0 comments

ಆಮೆರಿಕದ ರಿಲ್ಯಾಂಡ್ ಮನೆಯೊಂದರಲ್ಲಿ ಮೃತ ವ್ಯಕ್ತಿಯ ದೇಹದ ಪಕ್ಕ 124 ಹಾವುಗಳು ಪತ್ತೆಯಾಗಿದೆ. ಮೇರಿಲ್ಯಾಂಡ್‌ನ ಚಾಲ್ಸ್ ಕೌಂಟಿಯಲ್ಲಿರುವ ಮನೆಯೊಂದರಲ್ಲಿ ಮೃತ ವ್ಯಕ್ತಿಯ ದೇಹ ಪತ್ತೆಯಾಗಿದೆ. ಇಲ್ಲಿ ಅಚ್ಚರಿಯ ವಿಷಯವೆಂದರೆ, ಆ ಸ್ಥಳದಲ್ಲಿ 124 ವಿಷಕಾರಿ ಮತ್ತು ವಿಷರಹಿತ ಹಾವುಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೌಂಟಿಯ ಪಾಂಪ್ಲೆಟ್ ಪ್ರದೇಶದ ರಾಫೆಲ್ ಡ್ರೈವ್‌ನಲ್ಲಿ 40 ವರ್ಷದ ವ್ಯಕ್ತಿ ವಾಸವಾಗಿದ್ದರು. ಆತನನ್ನು ನೆರೆಮನೆಯವರು ಒಂದು ದಿನವೂ ಸಹ ನೋಡಿರಲಿಲ್ಲ. ಆದರೆ ಒಂದು ದಿನ ನೆರೆಮನೆಯವರು ಮನೆಯ ಕಿಟಕಿಯಿಂದ ಒಳಗೆ ನೋಡಿದಾಗ ಒಬ್ಬ ವ್ಯಕ್ತಿ ಪ್ರಜ್ಞಾಹೀನವಾಗಿ ನೆಲದ ಮೇಲೆ ಬಿದ್ದಿರುವುದನ್ನು ಕಂಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದು, ಮನೆ ಒಳಗೆ ಹೋದ ಅವರಿಗೆ ವ್ಯಕ್ತಿ ದೇಹ ಪತ್ತೆಯಾಗಿದೆ. ಆದರೆ ಆತನ ಸುತ್ತ ನೂರಕ್ಕೂ ಹೆಚ್ಚು ವಿಷಕಾರಿ ಹಾವುಗಳಿದ್ದುದ್ದನ್ನು ಕಂಡು ಪಚ ಅಚ್ಚರಿಗೊಂಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಸ್ತುತ ವೈದ್ಯರು ವ್ಯಕ್ತಿಯು ಸಾವನ್ನಪ್ಪಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ.

ಈಗ ಸಾವಿಗೆ ಕಾರಣ ತಿಳಿಯಲು ವೈದ್ಯರು ಪರೀಕ್ಷೆಯನ್ನು ಮಾಡುತ್ತಿದ್ದಾರೆ. ಮನೆಯಲ್ಲಿ ವಿವಿಧ ಪ್ರಭೇದಗಳ 100 ಕ್ಕೂ ಹೆಚ್ಚು ವಿಷಕಾರಿ ಮತ್ತು ವಿಷರಹಿತ ಹಾವುಗಳು ಮನೆಯ ಟ್ಯಾಂಕ್‌ಗಳಲ್ಲಿ ಇರುವುದು ಪತ್ತೆಯಾಗಿದೆ.

ಹಾವುಗಳಲ್ಲಿ ಹೆಬ್ಬಾವು, ಕಾಳಿಂಗ ಸರ್ಪ, ನಾಗರಹಾವು ಸೇರಿವೆ. ಈ ಹಾವುಗಳನ್ನು ಪ್ರಾಣಿ ನಿಯಂತ್ರಣ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ನನ್ನ 30 ವರ್ಷಗಳ ಅನುಭವದಲ್ಲಿ ಈ ರೀತಿಯ ಘಟನೆಯನ್ನು ನಾನು ಎಂದೂ ಎದುರಿಸಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

You may also like

Leave a Comment