Home » ಬೆಕ್ಕು ಕಳ್ಳತನ ಆಗಿದೆ ಅಂತ ಬೆಂಗಳೂರಿನಲ್ಲಿ ಎಫ್‌ಐಆರ್ !

ಬೆಕ್ಕು ಕಳ್ಳತನ ಆಗಿದೆ ಅಂತ ಬೆಂಗಳೂರಿನಲ್ಲಿ ಎಫ್‌ಐಆರ್ !

by Praveen Chennavara
0 comments

ಬೆಂಗಳೂರು : ಮನೆಯಲ್ಲಿ ವಯಸ್ಸಾಗಿರೋ ತಂದೆ-ತಾಯಿನೋ, ಅಜ್ಜನೋ ಮಿಸ್ಸಾದ್ರೆ ಹುಡುಕೋ ಪ್ರಯತ್ನ ಮಾಡದ ಈ ಕಾಲದಲ್ಲಿ, ಮನೆಯಲ್ಲಿ ಸಾಕಿದ ಬೆಕ್ಕು ಮಿಸ್ಸಾಗಿದೆ ಅಂತಾ ಕುಟುಂಬವೊಂದು ಠಾಣೆ ಮೆಟ್ಟಿಲೇರಿದೆ.

ಈ ಆಸಕ್ತಿಕರ ಕಥೆಯೊಂದರ ವಿವರ ಇಲ್ಲಿದೆ. ಹೌದು, ಬೆಂಗಳೂರಿನಲ್ಲಿ ಬೆಕ್ಕು ಕಳೆದು ಹೋಗಿದೆ, ಹುಡುಕಿಕೊಡಿ ಅಂತ ಕುಟುಂಬವೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ತಿಲಕನಗರ ನಿವಾಸಿ ಅನ್ವರ್ ಶರೀಫ್ ಮಗಳು ಮಿಸ್ಟಾ ಶರೀಫ್‌ಗೆ ಪ್ರಾಣಿಗಳನ್ನು ಸಾಕೋದು ಅಂದ್ರೆ ತುಂಬಾ ಪ್ರೀತಿ. 3 ವರ್ಷದ ಹಿಂದೆ ವೈಟ್ ಪರ್ಷಿಯನ್ ಬೆಕ್ಕಿನ ಮರಿಗೆ ಚರ್ಮದ ಅಲರ್ಜಿ ಆಗಿದೆ ಅಂತ ಯಾರೋ ರಸ್ತೆ ಪಕ್ಕದಲ್ಲಿ ಬಿಟ್ಟು ಹೋಗಿದ್ದು, ಇದನ್ನು ಆರೈಕೆ ಮಾಡಿ ಗುಣಪಡಿಸಿದ್ರು. ಅಂದಿನಿಂದ ಆ ಬೆಕ್ಕು ಇವರ ಮನೆಯ ಸದಸ್ಯರಲ್ಲಿ ಒಬ್ಬರಾಗಿದ್ದು. ಆದರೆ ಇದೀಗ ಪ್ರೀತಿಯ ಬೆಕ್ಕು ಇದೇ ಜ.15 ರಂದು ನಾಪತ್ತೆಯಾಗಿದೆ.

ಪ್ರಾಣಿಗಳ ಕಳ್ಳರ ಗ್ಯಾಂಗ್ ಬೆಕ್ಕನ್ನು ಕದ್ದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯ ತಿಲಕನಗರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಬೆಕ್ಕಿನ ಫೋಟೋ ಅಂಟಿಸಿ ಹುಡುಕಿಕೊಡುವವರಿಗೆ 35 ಸಾವಿರ ಬಹುಮಾನ ಕೊಡುವುದಾಗಿ ತಿಳಿಸಿದ್ದಾರೆ.

You may also like

Leave a Comment