Home » ಮಗನ ಸಾವಿನ ಸುದ್ದಿ ಕೇಳಿ, ತಾಯಿಯೂ ನಿಧನ |ಸಾವಿನಲ್ಲೂ ಒಂದಾದ ಕರುಳಬಳ್ಳಿಯ ಬಾಂಧವ್ಯ

ಮಗನ ಸಾವಿನ ಸುದ್ದಿ ಕೇಳಿ, ತಾಯಿಯೂ ನಿಧನ |ಸಾವಿನಲ್ಲೂ ಒಂದಾದ ಕರುಳಬಳ್ಳಿಯ ಬಾಂಧವ್ಯ

0 comments

ಮಂಡ್ಯ: ದಿಢೀರನೆ ಮಗನ ಸಾವಿನ ಸುದ್ದಿ ಕೇಳಿದ ತಾಯಿ ಕೂಡ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ನಡೆದಿದೆ.

ಕುಶಾಲ್ (45) ಎಂಬುವರು ಮೃತ ಮಗನಾಗಿದ್ದು, ನಿನ್ನೆ ಗ್ರಾಮದ ತಮ್ಮ ನಿವಾಸದಲ್ಲಿ ಟಿವಿ ನೋಡುತ್ತಿರುವ ವೇಳೆ ಇದ್ದಕ್ಕಿದ್ದಂತೆ ಕುಶಾಲ್‍ಗೆ ಲೋ ಬಿಪಿಯಾಗಿ ಕೆಳಗೆ ಬಿದ್ದು ಒದ್ದಾಡಿದ್ದಾರೆ. ಇದನ್ನು ಕಂಡ ಅಕ್ಕ-ಪಕ್ಕದ ಮನೆಯವರು ಕುಶಾಲ್‍ನನ್ನು ಮನೆಯಿಂದ ಹೊರಗಡೆಗೆ ಕರೆದುಕೊಂಡ ಬರುತ್ತಿದ್ದಂತೆ ಕುಶಾಲ್ ಸಾವನ್ನಪ್ಪಿದ್ದಾರೆ.

ಮನೆಯ ಪಕ್ಕದಲ್ಲೇ ಇದ್ದ ಕುಶಾಲ್ ತಾಯಿ ಲಕ್ಷ್ಮಮ್ಮ (69) ಏನ್ ಆಯ್ತು ಎಂದು ಬಂದು ನೋಡುವ ವೇಳೆಗೆ ತನ್ನ ಮಗ ಸಾವನ್ನಪ್ಪಿರುವ ದೃಶ್ಯ ಕಂಡು ಹೃದಯಾಘಾತವಾಗಿ ಅವರೂ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಸಾವಿನಲ್ಲೂ ಕರುಳಬಳ್ಳಿ ಒಂದಾಗಿವೆ ಎಂದು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

You may also like

Leave a Comment