Home » ಖ್ಯಾತ ಯಕ್ಷಗಾನ ಕಲಾವಿದ ಬೇತ ಕುಂಞ ಕುಲಾಲ್ ನಿಧನ

ಖ್ಯಾತ ಯಕ್ಷಗಾನ ಕಲಾವಿದ ಬೇತ ಕುಂಞ ಕುಲಾಲ್ ನಿಧನ

by Praveen Chennavara
0 comments

ಕರೋಪಾಡಿ ಗ್ರಾಮದ ಬೇತ ನಿವಾಸಿ, ಯಕ್ಷಗಾನ ಹಿರಿಯ ಕಲಾವಿದ ಬೇತ ಕುಂಞ ಕುಲಾಲ್(83) ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ಜ.26ರಂದು ನಿಧನ ಹೊಂದಿದರು.

ಧರ್ಮಸ್ಥಳ ಮೇಳದಲ್ಲಿ ಯಕ್ಷಗಾನ ರಂಗವನ್ನು ಪ್ರವೇಶಿಸಿದ ಅವರು ಕುತ್ಯಾರು ಮೇಳ, ಸುಬ್ರಹ್ಮಣ್ಯ ಮೇಳ, ಇರಾ ಕುಂಡಾವು ಮೇಳ ಮತ್ತು ಬಪ್ಪನಾಡು ಮೇಳದಲ್ಲಿ ಸೇರಿ ಒಟ್ಟು 35 ವರ್ಷಗಳ ಕಾಲ ಯಕ್ಷರಂಗದಲ್ಲಿ ಸೇವೆ ಸಲ್ಲಿಸಿದ್ದರು.

ಪರಂಪರೆಯ ದೇವೇಂದ್ರನ ಪಾತ್ರದಲ್ಲಿ ಎತ್ತಿದ ಕೈ ಆಗಿರುವ ಕುಂಞ ಕುಲಾಲ್ ಅವರನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಗೆನಾಡು ಶ್ರೀ ಸುಬ್ರಹ್ಮಣ್ಯೇಶ್ವರ ಕಲಾ ಸಂಘ ಸಮ್ಮಾನಿಸಿ, ಗೌರವಿಸಿದೆ.

ಮೃತರು ಪತ್ನಿ, ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ

You may also like

Leave a Comment