Home » ದೇಶದಲ್ಲಿ ಬುರ್ಖಾ ನಿಷೇಧಿಸಬೇಕು -ರಿಷಿ ಕುಮಾರ್ ಸ್ವಾಮೀಜಿ

ದೇಶದಲ್ಲಿ ಬುರ್ಖಾ ನಿಷೇಧಿಸಬೇಕು -ರಿಷಿ ಕುಮಾರ್ ಸ್ವಾಮೀಜಿ

by Praveen Chennavara
0 comments

ದೇಶದಲ್ಲಿ ಬುರ್ಖಾವನ್ನು ನಿಷೇಧಿಸಬೇಕು. ಕೇವಲ ಶಾಲೆಗಳಲ್ಲಿ ಮಾತ್ರ ಬುರ್ಖಾ ನಿಷೇಧ ಮಾಡುವುದಲ್ಲ. ದೇಶ ಹಾಗೂ ರಾಜ್ಯದಲ್ಲೂ ತ್ರಿವಳಿ ತಲಾಕ್ ನಿಷೇಧ ಮಾಡಿದಂತೆ ಬುರ್ಖಾ ನಿಷೇಧ ಮಾಡಬೇಕು ಎಂದು ರಿಷಿ ಕುಮಾರ್​ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಬುರ್ಖಾ ಧರಿಸಿ ಬಂದರೆ ನಿಮ್ಮ ಗುರುತು ಪತ್ತೆಯಾಗುವುದಿಲ್ಲ. ವಿದ್ಯಾರ್ಥಿನಿಯೇ ಬರುತ್ತಾರೋ ಅವರ ಅಕ್ಕ, ತಂಗಿ, ಅಮ್ಮ ಬರುತ್ತಾರೋ ಹೇಗೆ ಗೊತ್ತಾಗುತ್ತದೆ.? ಪರೀಕ್ಷೆ ಯಾರು ಬರೆಯುತ್ತಾರೆ ಅನ್ನೋದು ಹೇಗೆ ಗೊತ್ತಾಗುತ್ತದೆ. ಶಾಲೆಯ ಶಿಕ್ಷಕರು ತಂದೆ ತಾಯಿಯಂತೆ. ಸಹಪಾಠಿಗಳು ಸಹೋದರರಂತೆ ಅವರನ್ನು ಅನುಮಾನಿಸದರೆ ಹೇಗೆ ಎಂದು ಪ್ರಶ್ನಿಸಿದರು

ಇನ್ನು ಶ್ರೀರಂಗಪಟ್ಟಣದ ಮಸೀದಿ ತೆರವು ಮಾಡಿ, ಹನುಮ ದೇವಸ್ಥಾನ ಕಟ್ಟಬೇಕು ಹೇಳಿಕೆಗೆ ಈಗಲೂ ನಾನು ಬದ್ಧ. ಅಲ್ಲಿ ನನ್ನ ಹನುಮನ ದೇವಸ್ಥಾನ ಕಟ್ಟಲೇ ಬೇಕು. ಕೇವಲ ಶ್ರೀರಂಗಪಟ್ಟಣ ಮಾತ್ರವಲ್ಲ. ರಾಜ್ಯದ ಪ್ರತಿ ಹಳ್ಳಿಗೂ ಹೋಗುತ್ತೇನೆ. ನಾನು ಒಬ್ಬನೇ ಹೋಗುತ್ತೇನೆ. ಗುಂಪಿನ ಜೊತೆ ಹೋಗುವುದಿಲ್ಲ ಲಂಕೆಯನ್ನು ಸುಟ್ಟಿದ್ದು ಒಬ್ಬನೇ ಹನುಮ ಎಂದು ಹೇಳಿದರು.

You may also like

Leave a Comment