Home » ಪತ್ನಿಯ ಸಹಮತವಿಲ್ಲದೆ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವೆಂದು ಪರಿಗಣಿಸಲಾಗದು

ಪತ್ನಿಯ ಸಹಮತವಿಲ್ಲದೆ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವೆಂದು ಪರಿಗಣಿಸಲಾಗದು

by Praveen Chennavara
0 comments

ಮದುವೆಯಾಗಿದ್ದರೂ ಪತ್ನಿಯ ಸಹಮತ ಇಲ್ಲದೆ ನಡೆಸುವ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಪರಿಗಣಿಸಿದರೆ, ಆ ಕಾನೂನು ವ್ಯವಸ್ಥೆ ದುರುಪಯೋಗವಾಗಲಿದೆ. ಹೀಗೆಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಅರಿಕೆ ಮಾಡಿಕೊಂಡಿದೆ.

ಒಂದು ವೇಳೆ, ಪತ್ನಿಯ ಸಹಮತ ಇಲ್ಲದೆ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರ ಎಂದು ಪರಿಗಣಿಸಿದಲ್ಲಿ, ದೂರುಗಳ ಪ್ರವಾಹವೇ ಹರಿದು ಬರಲಿದೆ ಎಂದೂ ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಈ ಬಗ್ಗೆ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆ ಜ.12ರಿಂದ ನಡೆಯುತ್ತಿದೆ. ಶುಕ್ರವಾರ ನಡೆದ ವಾದ ಮಂಡನೆ ವೇಳೆ, ಕೇಂದ್ರ ಪರ ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇರುವ ಶಿಕ್ಷೆಯ ವ್ಯವಸ್ಥೆಯನ್ನು ಅದೇ ಮಾದರಿಯಲ್ಲಿ ದೇಶದಲ್ಲಿ ಜಾರಿಗೆ ತಂದರೆ ಪ್ರತಿಕೂಲ ಪರಿಣಾಮ ಉಂಟಾದೀತು ಎಂದಿದ್ದಾರೆ.

ಭಾರತೀಯ ದಂಡ ಸಹಿತೆಯ 498ರಲ್ಲಿ ಉಲ್ಲೇಖಗೊಂಡಿರುವ ವರದಕ್ಷಿಣೆ ವಿರೋಧಿಸಿ ಇರುವ ಅಂಶಗಳ ದುರುಪಯೋಗವಾಗುತ್ತಿರುವ ಬಗ್ಗೆ ಮೆಹ್ತಾ ಪ್ರಸ್ತಾಪಿಸಿದ್ದಾರೆ.

You may also like

Leave a Comment