Home » ಈ ದೋಸೆ ತಿಂದರೆ ಜೊತೆ 71 ಸಾವಿರ ರೂ ಬಹುಮಾನ ಇದೆ

ಈ ದೋಸೆ ತಿಂದರೆ ಜೊತೆ 71 ಸಾವಿರ ರೂ ಬಹುಮಾನ ಇದೆ

by Praveen Chennavara
0 comments

ಹಿಂದೆಲ್ಲಾ ನಾವು ಬಾಹುಬಲಿ ಥಾಲಿ ಅಂತಾ ಹೇಳಿ ಒಂದು ದೊಡ್ಡ ತಟ್ಟೆಯಲ್ಲಿ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಇರಿಸಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ್ದೇವೆ.

ಅದನ್ನು ತಿಂದವರಿಗೆ ಇಷ್ಟೊಂದು ಹಣವನ್ನು ಬಹುಮಾನವಾಗಿ ಕೊಡಲಾಗುವುದು ಎಂದು ಸಹ ಹೇಳಿರುವುದನ್ನು ನಾವು ಕೇಳಿದ್ದೇವೆ.

ಅದೇ ರೀತಿಯಾಗಿ ದೆಹಲಿಯ ಹೊಟೇಲ್‌ನಲ್ಲಿ 10 ಅಡಿ ಉದ್ದದ ಮಸಾಲೆ ದೋಸೆಯನ್ನು ತಿಂದು ಮುಗಿಸಿದರೆ ತುಂಬಾ ದೊಡ್ಡ ಮೊತ್ತದ ನಗದು ಹಣ ಬಹುಮಾನವಾಗಿ ಕೊಡಲಾಗುತ್ತದೆ.

ದೆಹಲಿಯ ಫುಡ್ ಬ್ಲಾಗರ್ ಒಬ್ಬರು ‘ದೆಹಲಿ ಟಮ್ಮಿ’ ಎಂಬ ಇನ್ ಸ್ಟಾಗ್ರಾಮ್ ಖಾತೆಯ ಪಟದಲ್ಲಿ 10 ಅಡಿ ಉದ್ದದ ಸ್ವಾದಿಷ್ಟಕರವಾದ ಮಸಾಲೆ ದೋಸೆ ತಿನ್ನಲು ಬರೋಬ್ಬರಿ 71,000 ರೂಪಾಯಿ ನಗದು ಹಣವನ್ನು ಬಹುಮಾನದ ರೂಪದಲ್ಲಿ ನೀಡುವ ಬಗ್ಗೆ ಸ್ಪರ್ಧೆಯನ್ನು ದೆಹಲಿಯ ಉತ್ತಮ ನಗರದಲ್ಲಿರುವ ಸ್ವಾಮಿ ಶಕ್ತಿ ಸಾಗರ್ ಹೊಟೇಲ್‌ನಲ್ಲಿ ಆಯೋಜಿಸಲಾಗಿದೆ ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಅಂದಹಾಗೆ ಈ ಉದ್ದನೆಯ ದೋಸೆಯ ಬೆಲೆ 1,500 ರೂಪಾಯಿ.

You may also like

Leave a Comment