Home » ಮದುಮಗಳ ಶೀಲದ ಜತೆಗೆ ಭರ್ತಿ ಚೀಲ ಹೊತ್ತೊಯ್ದ ಮದುಮಗ | ಮೊದಲ ರಾತ್ರಿಯ ಮುಂಜಾನೆಯಲ್ಲಿ ಆದದ್ದಾದರೂ ಏನು ?

ಮದುಮಗಳ ಶೀಲದ ಜತೆಗೆ ಭರ್ತಿ ಚೀಲ ಹೊತ್ತೊಯ್ದ ಮದುಮಗ | ಮೊದಲ ರಾತ್ರಿಯ ಮುಂಜಾನೆಯಲ್ಲಿ ಆದದ್ದಾದರೂ ಏನು ?

0 comments

ಮದುವೆಯಾಗಿ ಮೊದಲ ರಾತ್ರಿ ಮುಗಿಸಿ ಮರುದಿನ ಬೆಳಗ್ಗೆ ವಧುವಿನ ಮನೆಯಲ್ಲಿದ್ದ ಚಿನ್ನಾಭರಣವನ್ನೆಲ್ಲಾ ಕದ್ದು ಪರಾರಿಯಾಗಿದ್ದ ವರನನ್ನು ಕೇರಳದ ಅಡೂರು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಕೇರಳದ ಕಾಯಂಕುಲಂ ನಿವಾಸಿ ಅಜರುದ್ದೀನ್ ರಶೀದ್ ( 30) ಎಂಬಾತ ಪಹಕುಲಂ ಮೂಲದ ಮಹಿಳೆಯನ್ನು ಜನವರಿ 30 ರಂದು ಎಸ್ ಎಚ್ ಅಡಿಟೋರಿಯಂನಲ್ಲಿ ಮದುವೆಯಾಗಿದ್ದ. ಸಂಪ್ರದಾಯದಂತೆ ವಧುವಿನ ಮನೆಯಲ್ಲಿ ಮೊದಲ ರಾತ್ರಿ ನಡೆದಿತ್ತು. ಬೆಳಗಿನ ಜಾನ ಸುಮಾರು 3 ಗಂಟೆಗೆ ಸ್ನೇಹಿತನಿಗೆ ಅಪಘಾತವಾಗಿದೆ ಎಂದು ಹೇಳಿ ಅಜರುದ್ದೀನ್ ಮನೆಯಿಂದ ಹೋಗಿದ್ದಾನೆ.

ತುಂಬಾ ಹೊತ್ತಾದರೂ ಆತ ಮನೆಗೆ ಬರದೇ ಇರುವುದನ್ನು ನೋಡಿದ ಮನೆ ಮಂದಿ ಆತನಿಗೆ ಫೋನ್ ಮಾಡಿದಾಗ ಸ್ವಿಚ್ ಆಫ್ ಬರುತ್ತೆ. ಇದೇ ಸಂದರ್ಭದಲ್ಲಿ ವಧುವಿನ ಮನೆಯಲ್ಲಿದ್ದ 30 ಸವರನ್ ಚಿನ್ನ ಮತ್ತು 2.75 ಲಕ್ಷ ರೂ. ಹಣ ಕಾಣೆಯಾಗಿರುವುದು ತಿಳಿಯುತ್ತದೆ. ಅನುಮಾನಗೊಂಡ ವಧುವಿನ ಮನೆಯವರು ತಕ್ಷಣ ದೂರು ದಾಖಲಿಸುತ್ತಾರೆ.

ತನಿಖೆಗೆ ಇಳಿದ ಅಡೂರು ಪೊಲೀಸರಿಗೆ ಆರೋಪಿ ಅಜರುದ್ದೀನ್ ಕುರಿತು ಸ್ಪೋಟಕ
ಮಾಹಿತಿ ತಿಳಿಯುತ್ತದೆ. ಎರಡು ವರ್ಷಗಳ ಹಿಂದೆ ಅಲಪ್ಪುಳದ ಚೆಪ್ಪಾಡ್ ಎಂಬಲ್ಲಿ ಯುವತಿಯೊಬ್ಬಳನ್ನು ಮದುವೆಯಾಗಿದ್ದ ಎಂಬ ವರದಿ ತಿಳಿಯುತ್ತದೆ.

ಆತ ಮೊದಲ ಹೆಂಡತಿಯ ಬಳಿ ಇದ್ದಾನೆ ಎಂಬ ಸಂಗತಿ ಪೊಲೀಸರಿಗೆ ತಿಳಿಯುತ್ತದೆ. ಎರಡು ವರ್ಷಗಳ ಹಿಂದೆ ಅಲಪ್ಪುಳದ ಚೆಪ್ಪಾಡ್ ಎಂಬಲ್ಲಿ ಯುವತಿಯೊಬ್ಬಳನ್ನು ಮದುವೆಯಾಗಿದ್ದ ಎಂಬ ಸಂಗತಿ ಬಯಲಾಗುತ್ತದೆ. ತಕ್ಷಣವೇ ಕಾರ್ಯಾಚರಣೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿ, ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ.

ಈ ವಿಷಯ ತಿಳಿದ ವಧು ಆಘಾತಕ್ಕೊಳಗಾಗಿದ್ದಾಳೆ.

You may also like

Leave a Comment