ಮಂಗಳೂರು : ಶ್ರೀದೇವಿ ಕಾಲೇಜು ಆವರಣಕ್ಕೆ ಹುಡುಗರ ತಂಡವೊಂದು ಒಳನುಗ್ಗಿ ತಲವಾರು ಹಿಡಿದು ದಾಂಧಲೆ ನಡೆಸಿದ ಘಟನೆ ನಗರದ ಬಳ್ಳಾಲ್ ಬಾಗ್ ನಲ್ಲಿ ನಡೆದಿದೆ.

ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆಗೆ ಘಟನೆ ನಡೆದಿದ್ದು,
ಹುಡುಗರ ಗುಂಪೊಂದು ಕಾಲೇಜು ಮುಂಭಾಗದ ರಸ್ತೆಯಲ್ಲಿ ಸ್ಕೂಟರಿನಲ್ಲಿ ಬಂದಿದ್ದು ಈ ವೇಳೆ ಕೇರಳ ಮೂಲದ ವಿದ್ಯಾರ್ಥಿಗಳಿಗೆ ವಾಹನ ತಾಗಿತ್ತು. ಇದರ ಬಗ್ಗೆ ಎರಡು ತಂಡದ ವಿದ್ಯಾರ್ಥಿಗಳ ನಡುವೆ ಮಾತಿಗೆ ಮಾತು ಬೆಳೆದಿತ್ತು.ಆದರೆ ಎರಡೂ ಕಡೆಯವರಿಗೆ ಭಾಷೆ ತಿಳಿಯದ ಕಾರಣ ಏನೇನೋ ಮಾತಾಡಿಕೊಂಡಿದ್ದರು.ಆನಂತರ ಅದೇ ಕಾಲೇಜಿನಲ್ಲಿ ಮಲಯಾಳಿ ವಿದ್ಯಾರ್ಥಿಗಳ ಸಹಪಾಠಿಯಾಗಿರುವ, ಮಂಗಳೂರಿನ ವಿದ್ಯಾರ್ಥಿಯೊಬ್ಬ ಅಲ್ಲಿಗೆ ಬಂದಿದ್ದು ಎರಡೂ ಗುಂಪಿನವರಿಗೆ ಬುದ್ಧಿಮಾತು ಹೇಳಿದ್ದಾನೆ. ಮಲಯಾಳ ಬಾರದ ಹುಡುಗರನ್ನು ಅಲ್ಲಿಂದ ಹೋಗುವಂತೆ ಹೇಳಿದ್ದ.
ಆದರೆ ಇದನ್ನೇ ನೆಪವಾಗಿರಿಸಿದ ಕಿಡಿಗೇಡಿ ಹುಡುಗರ ಗುಂಪು ಅಲ್ಲಿಂದ ಹಿಂತಿರುಗಿದ್ದು ಸ್ವಲ್ಪ ಹೊತ್ತಿನಲ್ಲಿ ಸ್ಥಳಕ್ಕೆ ತಲವಾರು ಹಿಡಿದು ಐದಾರು ಮಂದಿ ಕಾಲೇಜು ಆವರಣಕ್ಕೆ ಬಂದು, ಮಲಯಾಳಿಗಳು ಮತ್ತು ಇನ್ನೊಬ್ಬ ವಿದ್ಯಾರ್ಥಿಯನ್ನು ಹುಡುಕಾಟ ನಡೆಸಿದೆ. ತಲವಾರು ಹಿಡಿದು ಅತ್ತಿತ್ತ ಹೋಗಿದ್ದು, ಅಲ್ಲಿ ಮಲಯಾಳಿ ಹುಡುಗರಾಗಲೀ, ಬುದ್ಧಿಮಾತು ಹೇಳಿದ ವಿದ್ಯಾರ್ಥಿಯಾಗಲೀ ಸಿಕ್ಕಿರಲಿಲ್ಲ. ಹುಡುಗರು ಹೊರಗಿನವರಾಗಿದ್ದು, ಕಾಲೇಜಿಗೆ ಸಂಬಂಧಪಟ್ಟವರಲ್ಲ.
ಕಾಲೇಜು ಆವರಣದಲ್ಲಿ ತಲವಾರು ಹಿಡಿದು ಠಳಾಯಿಸಿದ ಹುಡುಗರ ವಿಡಿಯೋವನ್ನು ಕಾಲೇಜಿನ ವಿದ್ಯಾರ್ಥಿಗಳು ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದು, ಅದೀಗ ವೈರಲ್ ಆಗಿದೆ. ಬರ್ಕೆ ಠಾಣೆಯಲ್ಲಿ ಸ್ಥಳೀಯ ವಿದ್ಯಾರ್ಥಿ ದೂರು ನೀಡಿದ್ದು, ತಲವಾರು ಹಿಡಿದು ಬಂದವರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.ಎರಡೂ ಕಡೆಯ ಗುಂಪನ್ನು ಠಾಣೆಗೆ ಕರೆಸಿ, ಪೊಲೀಸರು ಮಾತುಕತೆ ನಡೆಸುತ್ತಿದ್ದಾರೆ.
