ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ- ಕರ್ನಾಟಕ ( ಎನಿಮಲ್ ಹಸ್ಬೆಂಡ್ರಿ ಆಂಡ್ ವೆಟರಿನರಿ ಸರ್ವಿಸಸ್ ಕರ್ನಾಟಕ – ಎಎಚ್ ವಿಎಸ್ ಕರ್ನಾಟಕ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.
ಒಟ್ಟು 400 ವೆಟರ್ನರಿ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಜನವರಿ 31 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಹುದ್ದೆಯ ಹೆಸರು : ವೆಟರ್ನರಿ ಆಫೀಸರ್
ಒಟ್ಟು ಹುದ್ದೆಗಳು : 400
ವಿದ್ಯಾರ್ಹತೆ : ಬಿ ಎಸ್ಸಿ, ಬಿ.ವಿ.ಎಸ್ಸಿ ( AH)
ಉದ್ಯೋಗ ಸ್ಥಳ : ಕರ್ನಾಟಕ
ವಿದ್ಯಾರ್ಹತೆ : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ವೆಟರ್ನರಿ ಆಪೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಬೋರ್ಡ್ ನಿಂದ ಕಡ್ಡಾಯವಾಗಿ ಶೇ.50 ರಷ್ಟು ಅಂಕಗಳೊಂದಿಗೆ ಬಿ.ವಿ.ಎಸ್ಸಿ , ಬಿ.ವಿ.ಎಸ್ಸಿ ( AH) ಪೂರ್ಣಗೊಳಿಸಿರಬೇಕು.
ವಯೋಮಿತಿ : ವೆಟರ್ನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕು.
ವರ್ಗಾವಾರು ವಯೋಮಿತಿ ಸಡಿಲಿಕೆಯನ್ನು ಅಭ್ಯರ್ಥಿಗಳಿಗೆ ನೀಡಲಾಗಿದೆ.
ಅರ್ಜಿ ಶುಲ್ಕ : ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.52,650/-, -97,100/- ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ : ಕನ್ನಡ ಭಾಷಾ ಪರೀಕ್ಷೆ, ಮೆರಿಟ್ ಲಿಸ್ಟ್, ದಾಖಲಾತಿ ಪರಿಶೀಲನೆ, ಸಂದರ್ಶನ ದ ಮೂಲಕ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
