Home » ತಾಲ್ಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಮಾರ್ಚ್ ಇಲ್ಲವೇ ಎಪ್ರಿಲ್ ಒಳಗಾಗಿ- ಕೆ ಎಸ್ ಈಶ್ವರಪ್ಪ

ತಾಲ್ಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಮಾರ್ಚ್ ಇಲ್ಲವೇ ಎಪ್ರಿಲ್ ಒಳಗಾಗಿ- ಕೆ ಎಸ್ ಈಶ್ವರಪ್ಪ

0 comments

ರಾಜ್ಯದಲ್ಲಿ ತಾಲ್ಲೂಕು ಮತ್ತು ಜಿಲ್ಲಾ‌ ಪಂಚಾಯತ್ ಚುನಾವಣೆಯನ್ನು ಬರುವ ಮಾರ್ಚ್ ಇಲ್ಲವೇ ಎಪ್ರಿಲ್ ಒಳಗಾಗಿ ಮಾಡಲಾಗುವುದು ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಈ ಬಗ್ಗೆ ಸರಕಾರ ತೀರ್ಮಾನ ಕೈಗೊಂಡಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ತಾಲ್ಲೂಕು ಜಿಲ್ಲಾ ಪಂಚಾಯತಿ ಚುನಾವಣೆ ನಡೆಸಬೇಕು ಎಂದು ಈ ಹಿಂದೆಯೇ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿತ್ತು. ದಿನಾಂಕವನ್ನು ಕೂಡ ಆಯೋಗ ‌ನಿಗದಿ ಮಾಡಿತ್ತು. ಆದರೆ ಚುನಾವಣೆ ನಡೆಸುವ ಆಕ್ಷೇಪಣಾ ಅರ್ಜಿಗಳು ಬಂದಿದ್ದರಿಂದ ಚುನಾವಣೆ ಮುಂದೂಡಲಾಗಿತ್ತು.

ಲಕ್ಷ್ಮೀ ನಾರಾಯಣ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ವರದಿ ಬಂದ ಕೂಡಲೇ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಸಚಿವರು ಹೇಳಿದ್ದಾರೆ

You may also like

Leave a Comment