Home » ಮೊಬೈಲ್ ಫೋನ್ ನಲ್ಲೇ ಮಾತನಾಡುತ್ತಾ, ಮೆಟ್ರೋ ಹಳಿಯ ಮೇಲೆ ಬಿದ್ದ ಭೂಪ| ಜಂಗಮವಾಣಿಯ ಸಹವಾಸದಿಂದ ಜೀವಕ್ಕೆ ಸಂಚಾಕಾರ ತಂದ ಅಸಾಮಿ

ಮೊಬೈಲ್ ಫೋನ್ ನಲ್ಲೇ ಮಾತನಾಡುತ್ತಾ, ಮೆಟ್ರೋ ಹಳಿಯ ಮೇಲೆ ಬಿದ್ದ ಭೂಪ| ಜಂಗಮವಾಣಿಯ ಸಹವಾಸದಿಂದ ಜೀವಕ್ಕೆ ಸಂಚಾಕಾರ ತಂದ ಅಸಾಮಿ

0 comments

ಕೆಲವರು ಫೋನಲ್ಲಿ ಮಾತನಾಡುವಾಗ ಎಷ್ಟು ಮಗ್ನರಾಗಿರುತ್ತಾರೆಂದರೆ ಅವರಿಗೆ ಹೊರಗಿನ ಪ್ರಪಂಚದ ಧ್ಯಾನ ಇರುವುದಿಲ್ಲ. ಈ ಜಂಗಮವಾಣಿಯ ಮಹಿಮೆ ಇದು. ಇಂದಿನ ಯುವ ಪೀಳಿಗೆಯು ಇದರ ಉಪಯೋಗವನ್ನು ನಿಂತಲ್ಲಿ ಕುಂತಲ್ಲಿ, ವಾಹನ ಚಾಲನೆ ಮಾಡುವಾಗ ಎಲ್ಲಾ ಕಡೆ ಉಪಯೋಗ ಮಾಡುತ್ತಾರೆ. ಅಷ್ಟು ಮಾತ್ರವಲ್ಲ ರಸ್ತೆಯಲ್ಲಿಯೂ ಕೆಲವೊಮ್ಮೆ ಯಾವುದರ ಪರಿವೆಯೂ ಇಲ್ಲದೇ ಈ ಮೊಬೈಲ್ ಫೋನನ್ನು ಉಪಯೋಗಿಸುವ ಮಂದಿ ಅನೇಕ. ಇದರಿಂದ ಎಷ್ಟೋ ಅನಾಹುತಗಳು ಕೂಡಾ ನಡೆದಿವೆ. ತಮ್ಮ ಪಕ್ಕದಲ್ಲಿ ಏನು ನಡೆದರೂ ಪರಿವೆನೂ ಕೆಲವರಿಗೆ ಇರುವುದಿಲ್ಲ.

ಹೊಸದಿಲ್ಲಿಯ ಮೆಟ್ರೋ ಸ್ಟೇಷನ್ ಒಳಗೆ ಇಂಥದ್ದೊಂದು ಘಟನೆ ನಡೆದಿದೆ. ಫೋನ್ ಸಹವಾಸದಲ್ಲಿ ಇದ್ದ ವ್ಯಕ್ತಿಯೊಬ್ಬ ಮೆಟ್ರೋ ಹಳಿ ಮೇಲೆ ಬಿದ್ದು ಯಡವಟ್ಟು ಮಾಡಿಕೊಂಡಿದ್ದಾನೆ.

ಮೆಟ್ರೋ ನಿಲ್ದಾದೊಳಗೆ ಪ್ರವೇಶಿಸಿದ ಈ ಅಸಾಮಿ ಅದರಲ್ಲಿಯೇ ತಲ್ಲೀನನಾಗಿ ಪ್ಲಾಟ್ ಫಾರ್ಮ್ ಗೆ ಬಂದಿದ್ದಾನೆ. ಅಕ್ಕ ಪಕ್ಕ, ಮುಂದೆ ಎಲ್ಲಿಯೂ ‌ನೋಡದೆ ನಡೆಯುತ್ತಾ ಪ್ಲಾಟ್ ಫಾರ್ಮ್ ಹಳಿಗಳ‌ಮೇಲೆ ಮುಗ್ಗರಿಸಿ ಬಿದ್ದಿದ್ದಾನೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಳಿಗಳ ಮೇಲೆ ಬಿದ್ದ ನಂತರವೇ ಆತನು ವಾಸ್ತವ ಜಗತ್ತಿಗೆ ಮರಳಿದ್ದಾನೆ. ಇದನ್ನು ಕಂಡ ಕೈಗಾರಿಕಾ‌ ಭದ್ರತಾ ಪಡೆ ಸಿಬ್ಬಂದಿ ಅಲ್ಲಿಗೆ ದೌಡಾಯಿಸಿ‌ ಆತನಿಗೆ ಸಹಾಯ ಮಾಡಿದ್ದಾರೆ. ಕೂಡಲೇ ಸಿಬ್ಬಂದಿ ಮೆಟ್ರೋ ರೈಲು ಬರುವ ಮೊದಲೇ ಆತನನ್ನು ಮೇಲಕ್ಕೆತ್ತಿದ್ದಾರೆ. ಕೊಂಚ ತಡವಾಗಿದ್ದರೆ ಆತನ ಪ್ರಾಣಕ್ಕೆ ಸಂಚಾಕಾರವಾಗುತ್ತಿತ್ತು.

You may also like

Leave a Comment