Home » ಭಾರತದ ಈಗಿನ ಮುಸ್ಲಿಮರ ಪೂರ್ವಜರೆಲ್ಲ ಹಿಂದೂಗಳೇ| ತನ್ವೀರ್ ಸೇಠ್ ತಾತ ಕೂಡ ಹಿಂದೂವೇ- ಪ್ರತಾಪ್ ಸಿಂಹ ಹೇಳಿಕೆ

ಭಾರತದ ಈಗಿನ ಮುಸ್ಲಿಮರ ಪೂರ್ವಜರೆಲ್ಲ ಹಿಂದೂಗಳೇ| ತನ್ವೀರ್ ಸೇಠ್ ತಾತ ಕೂಡ ಹಿಂದೂವೇ- ಪ್ರತಾಪ್ ಸಿಂಹ ಹೇಳಿಕೆ

0 comments

ಹಿಜಾಬ್ ವಿವಾದ ಈಗ ರಾಷ್ಟ್ರ ವ್ಯಾಪ್ತಿ ಚರ್ಚೆಯ ವಿಷಯ ಆಗಿದೆ. ಎಲ್ಲಾ ರಾಜಕಾರಣಿಗಳು ಕೂಡಾ ಇದರ ಬಗ್ಗೆನೇ ವಿವರಣೆ ನೀಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಪ್ರತಾಪ್ ಸಿಂಹ ಅವರ ಹೇಳಿಕೆಗೆ ತನ್ವೀರ್ ಅವರು ಹೊರಗೆ ಹೋಗಿ ಎನ್ನಲು ಈ ದೇಶ ಇವರ ತಾತನದ್ದಾ ? ಎಂಬ ಹೇಳಿಕೆಯನ್ನು ನೀಡಿದ್ದರು. ಈಗ ಮರು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಅವರು,’ ಇದು ನಮ್ಮ ತಾತ‌ನದ್ದೇ ದೇಶ. ತನ್ವೀರ್ ಸೇಠ್ ತಾತ ಕೂಡ ಹಿಂದೂ ಆಗಿದ್ದರು. ಅವರು ಮಕ್ಕಾ, ಮದೀನದಿಂದ ಬಂದವರಲ್ಲ. ಭಾರತದಲ್ಲಿರುವ ಮುಸ್ಲಿಮರನ್ನು, ಕ್ರೈಸ್ತರನ್ನು ಬೆತ್ಲೆಹಮ್, ಜೆರುಸಲೆಂ, ರೋಂ, ಮಕ್ಕಾ ಅಥವಾ ಮದೀನದಿಂದ ಕರೆದುಕೊಂಡು ಬಂದದ್ದಲ್ಲ. ಅವರ ಪೂರ್ವಜರೆಲ್ಲ ಹಿಂದೂಗಳೇ ಆಗಿದ್ದವರು ಎಂಬ ಸತ್ಯವನ್ನು ಒಪ್ಪಿಕೊಳ್ಳಲಿ’ ಎಂದು ಖಾರವಾಗಿಯೇ ತಿರುಗೇಟು ನೀಡಿದ್ದಾರೆ.

ಅವರ ಪೂರ್ವಜರು ಇಲ್ಲೇ ಹುಟ್ಟಿ ಬೆಳೆದು ಮತಾಂತರಗೊಂಡವರು. ಆದ ಕಾರಣ ಇಂದು ತನ್ವೀರ್ ಸೇಠ್ ಆಗಿದ್ದಾರೆ. ಅಷ್ಟೇ ವ್ಯತ್ಯಾಸ. ಅವರ ತಾತ ಹಿಂದೂ ಆಗಿದ್ದರು ಎಂಬ ಸತ್ಯವನ್ನು ಅರಿತುಕೊಂಡು ಮಾತನಾಡಲಿ’ ಎಂದು ಪ್ರತಿಕ್ರಿಯಿಸಿದ್ದಾರೆ.

You may also like

Leave a Comment