Home » ಕೈ ಕಾಲು ತೊಳೆಯಲೆಂದು ನದಿಯ ದಡಕ್ಕೆ ಹೋದ ಯುವಕನನ್ನು ಎಳೆದೊಯ್ದ ಮೊಸಳೆ| ಮೊಸಳೆ ದಾಳಿಗೆ ಬಲಿಯಾದ 22 ರ ಯುವಕ|

ಕೈ ಕಾಲು ತೊಳೆಯಲೆಂದು ನದಿಯ ದಡಕ್ಕೆ ಹೋದ ಯುವಕನನ್ನು ಎಳೆದೊಯ್ದ ಮೊಸಳೆ| ಮೊಸಳೆ ದಾಳಿಗೆ ಬಲಿಯಾದ 22 ರ ಯುವಕ|

0 comments

ಆತ ಎಂದಿನಂತೆ ತನ್ನ ಕೆಲಸ ಕಾರ್ಯಗಳನ್ನು ಮುಗಿಸಿ, ಮನೆ ಕಡೆ ದಾರಿ ಹಿಡಿಯಲು ರೆಡಿ ಆಗಿದ್ದ. ಕೈಕಾಲು ತೊಳೆಯುವ ಎಂದು ಹತ್ತಿರದಲ್ಲೇ ಇದ್ದ ಕಾಳಿ ನದಿಯ ದಡಕ್ಕೆ ಹೋಗಿದ್ದಾನೆ. ಇನ್ನೇನು ಕೈ ಹಾಕಬೇಕು ನೀರಿಗೆ ಅನ್ನುವಷ್ಟರಲ್ಲಿಯೇ ಅದೇ ನದಿಯ ನೀರಿನಲ್ಲಿ ಹೊಂಚು ಹಾಕಿ ಕುಳಿತಿದ್ದ ಮೊಸಳೆಯೊಂದು ಈತನನ್ನು ಎಳೆದುಕೊಂಡು ಹೋಯಿತು.

ಈ ದುರದೃಷ್ಟಕರ ಘಟನೆ ನಡೆದಿರುವುದು ಉತ್ತರಕನ್ನಡದಲ್ಲಿ. ಅರ್ಷದ್ ಖಾನ್ ರಾಯಚೂರ್ ( 22) ಮೊಸಳೆ ದಾಳಿಗೆ ಬಲಿಯಾದ ಯುವಕ.

ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಪಟೇಲ್ ನಗರದ ನಿವಾಸಿ ಈ ಮೃತ ಯುವಕ. ದಿನನಿತ್ಯದ ಕೆಲಸ ಮುಗಿಸಿ ಕೈಕಾಲು ತೊಳೆಯಲು ಕಾಳಿ ನದಿಯ ದಡಕ್ಕೆ ಹೋಗಿದ್ದ. ನೀರಿಗೆ ಕೈ ಹಾಕುತ್ತಿದ್ದಂತೆ ಮೊಸಳೆ ಆತನನ್ನು ನೀರೊಳಗೆ ಕರೆದುಕೊಂಡು ಹೋಗಿದೆ. ಈ ಬಗ್ಗೆ ಮೃತ ಯುವಕನ ಸ್ನೇಹಿತ ಮಾಹಿತಿಯನ್ನು ನೀಡಿದ್ದಾನೆ.

ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಯುವಕನ ಮೃತ ದೇಹಕ್ಕಾಗಿ ಹುಡುಕಾಟ ನಡೆಸಿದೆ.

ದಾಂಡೇಲಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

You may also like

Leave a Comment