Home » ಸ್ವರ್ಗದ ಬಾಗಿಲಿನಂತಿದೆ ವಿಶ್ವದ ಅತಿ ಎತ್ತರದ ಚೀನಾಬ್ ರೈಲ್ವೆ ಸೇತುವೆ !! | ಮೋಡಗಳ ಮೇಲೆ ಕಮಾನು ಕಟ್ಟಿದಂತಿರುವ ಈ ಸೇತುವೆಯ ಫೋಟೋಗಳು ಫುಲ್ ವೈರಲ್

ಸ್ವರ್ಗದ ಬಾಗಿಲಿನಂತಿದೆ ವಿಶ್ವದ ಅತಿ ಎತ್ತರದ ಚೀನಾಬ್ ರೈಲ್ವೆ ಸೇತುವೆ !! | ಮೋಡಗಳ ಮೇಲೆ ಕಮಾನು ಕಟ್ಟಿದಂತಿರುವ ಈ ಸೇತುವೆಯ ಫೋಟೋಗಳು ಫುಲ್ ವೈರಲ್

0 comments

ಇಡೀ ವಿಶ್ವವೇ ಭಾರತದತ್ತ ತಿರುಗಿನೋಡುವಂತಹ ಅಭಿವೃದ್ಧಿ ಪಥದಲ್ಲಿದೆ ಭಾರತದ ರೈಲ್ವೆ ಇಲಾಖೆ. ಹೌದು, ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ ಚೀನಾಬ್ ಸೇತುವೆಯ ಫೋಟೋಗಳನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ‘ಮೋಡಗಳ ಮೇಲಿನ ವಿಶ್ವದ ಅತಿ ಎತ್ತರದ ಕಮಾನು ಚೀನಾಬ್ ಸೇತುವೆ’ ಎಂಬ ಶೀರ್ಷಿಕೆಯಡಿ ಫೋಟೊವನ್ನು ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ಪರ್ವತಗಳ ನಡುವೆ ಎತ್ತರವಾಗಿ ನಿಂತಿರುವಂತೆ ಸೇತುವೆಯು ಮೋಡಗಳ ಮೇಲೆ ಕಮಾನುಗಳಾಗಿ ಕಾಣುತ್ತದೆ. ಚೀನಾಬ್ ರೈಲು ಸೇತುವೆಯು ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಬಕ್ಕಲ್ ಮತ್ತು ಕೌರಿ ನಡುವೆ ಇದೆ. ಇದು 1,315 ಮೀಟರ್ ಉದ್ದ ಮತ್ತು ನದಿಯಿಂದ 359 ಮೀಟರ್ ಎತ್ತರದಲ್ಲಿದೆ. ಇದು ಫ್ರಾನ್ಸ್‌ನ ಪ್ಯಾರಿಸ್‍ನಲ್ಲಿರುವ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರದಲ್ಲಿದೆ.

ಈ ಸೇತುವೆಯು ಕಾಶ್ಮೀರ ಕಣಿವೆಗೆ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ಚೀನಾಬ್ ಸೇತುವೆಯ ಅತ್ಯಾಕರ್ಷಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

You may also like

Leave a Comment