Home » ಗಂಡು ಮಗು ಬೇಕೆಂದು ಕೇಳಿದ ಗರ್ಭಿಣಿಯ ತಲೆಗೆ ಮೊಳೆ ಹೊಡೆದ ಧರ್ಮಗುರು !

ಗಂಡು ಮಗು ಬೇಕೆಂದು ಕೇಳಿದ ಗರ್ಭಿಣಿಯ ತಲೆಗೆ ಮೊಳೆ ಹೊಡೆದ ಧರ್ಮಗುರು !

by Praveen Chennavara
0 comments

ಗಂಡು ಮಗುವೇ ಜನಿಸಬೇಕು ಎನ್ನುವ ಕಾರಣಕ್ಕೆ ಮುಸ್ಲಿಂ ಧರ್ಮಗುರುವೊಬ್ಬರು ಗರ್ಭಿಣಿಯ ತಲೆಗೆ ಮೊಳೆ ಹೊಡೆದಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಈಗಾಗಲೇ ಮೂರು ಹೆಣ್ಣು ಮಕ್ಕಳ ತಾಯಿಯಾಗಿರುವ ಗರ್ಭಿಣಿ. ಈಗ ಗರ್ಭದಲ್ಲಿರುವ ಮಗು ಗಂಡೇ ಆಗಬೇಕೆಂದು ಕೋರಿಕೊಂಡು ಧರ್ಮಗುರುವಿನ ಬಳಿ ತೆರಳಿದ್ದಾಳೆ. ಆತ ಸುಮಾರು 5 ಸೆಂ.ಮೀ. ಉದ್ದದ ಮೊಳೆಯನ್ನು ಆಕೆಯ ತಲೆ ಮೇಲೆ ಹೊಡೆದಿದ್ದಾನೆ.

ಅದೃಷ್ಟವಶಾತ್ ಆಕೆಯ ಮೆದುಳಿಗೆ ಅದು ತಾಕಿಲ್ಲ. ನೋವು ತಡೆಯಲಾರದೆ ಮಹಿಳೆ ಮೊಳೆಯನ್ನು ಕಟಿಂಗ್ ಪ್ಲೇಯರ್‌ನ ಸಹಾಯದಿಂದ ಹೊರಗೆ ತೆಗೆಯಲು ಪ್ರಯತ್ನಿಸಿದ್ದಾಳೆ. ಆದರೆ ಅದು ಆಗದಿದ್ದಾಗ ವೈದ್ಯರ ಬಳಿ ತೆರಳಿದ್ದಾಳೆ. ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಿಖೆ ನಡೆಯುತ್ತಿದೆ.

You may also like

Leave a Comment