Home » ವಿಚ್ಛೇದನ ಕೊಟ್ಟು 24 ಗಂಟೆ ಮುಗಿಯೊದರೊಳಗೆ 3 ನೇ ಮದುವೆ| 18 ರ ಯುವತಿಯನ್ನು ವರಿಸಿದ 49ರ ಹರೆಯದ ಸಂಸದ

ವಿಚ್ಛೇದನ ಕೊಟ್ಟು 24 ಗಂಟೆ ಮುಗಿಯೊದರೊಳಗೆ 3 ನೇ ಮದುವೆ| 18 ರ ಯುವತಿಯನ್ನು ವರಿಸಿದ 49ರ ಹರೆಯದ ಸಂಸದ

0 comments

ಮದುವೆ ಎನ್ನುವುದು ಕೆಲವರಿಗೆ ಒಂದೇ ಬಾರಿ ಆಗುತ್ತೆ. ಇನ್ನು ಕೆಲವರಿಗೆ ಹಲವಾರು ಬಾರಿ ಆಗುತ್ತೆ. ಅಂತಹುದೇ ಒಂದು ಮದುವೆ ಇದು‌. ಇಮ್ರಾನ್ ಖಾನ್ ಅವರ ಆಪ್ತ ಸಹಾಯಕ ಹಾಗೂ ಪಾಕಿಸ್ತಾನದ ಸಂಸದೀಯ ಸದಸ್ಯ ಡಾ.ಅಮೀರ್ ಲಿಯಾಖತ್ ಹುಸೇನ್ ( 49) ಅವರ 3 ನೇ ವಿವಾಹ ಭಾರೀ ಸದ್ದು ಮಾಡುತ್ತಿದೆ. 18 ವರ್ಷ ವಯಸ್ಸಿನ ಸಯೀದಾ ದಾನಿಯಾ ಶಾರನ್ನು ತನ್ನ 2 ನೇ ಹೆಂಡತಿಯಿಂದ ವಿಚ್ಛೇದನ ಪಡೆದ ದಿನವೇ 3 ನೇ ಮದುವೆ ಆಗಿದ್ದಾರೆ.

ಹಿಂದಿನ ಮದುವೆ ಒಂದು ಕೆಟ್ಟ ಗಳಿಗೆ ಎಂದು ಅಮೀರ್ ಅವರು ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ. ಅದು ನನ್ನ ತಪ್ಪು ನಿರ್ಧಾರವಾಗಿತ್ತು. ಹಾಗೇನೇ ತಮ್ಮ ಮೂರನೇ ಹೆಂಡತಿಯ ಬಗ್ಗೆ ಅಮೀರ್ ಮೆಚ್ಚುಗೆಯ ಮಾತುಗಳನ್ನು ಬರೆದಿದ್ದಾರೆ. ತುಂಬಾ ಸುಂದರ, ಒಳ್ಳೆಯವಳು, ತುಂಬಾ ಸರಳ ಅಂತೆಲ್ಲಾ ಬರೆದುಕೊಂಡಿದ್ದಾರೆ.

ಅಮೀರ್ ಲಿಯಾಕತ್ ಅವರು ನಟಿ ಸೈಯದ್ ತುಬಾ ಅವರನ್ನು ಎರಡನೇ ಮದುವೆಯಾಗಿದ್ದರು. 14 ತಿಂಗಳಿನಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ನಟಿ ತುಬಾ ಕೂಡಾ ಇನ್ಸ್ಟಾಗ್ರಾಂ ಮೂಲಕ ವಿಚ್ಚೇದನ ಘೋಷಿಸಿದ್ದಾರೆ.

ಅಮೀರ್ ಲಿಯಾಖತ್ ಹುಸೇನ್ ತಮ್ಮ ಮೊದಲ ಪತ್ನಿ ಸಯೀದ್ ಬುಸ್ರಾ ಇಕ್ಬಾಲ್ ಅವರಿಗೆ ಫೋನ್ ಮೂಲಕ ವಿಚ್ಛೇದನ ನೀಡಿದ್ದರು.

You may also like

Leave a Comment