Home » ಹಿಜಾಬಿಯೇ ಒಂದಲ್ಲ ಒಂದು ದಿನ ಭಾರತದ ಪ್ರಧಾನ ಮಂತ್ರಿಯಾಗುತ್ತಾಳೆ| ಅಸಾಸುದ್ದೀನ್ ಓವೈಸಿ

ಹಿಜಾಬಿಯೇ ಒಂದಲ್ಲ ಒಂದು ದಿನ ಭಾರತದ ಪ್ರಧಾನ ಮಂತ್ರಿಯಾಗುತ್ತಾಳೆ| ಅಸಾಸುದ್ದೀನ್ ಓವೈಸಿ

0 comments

ಹಿಜಾಬ್ ವಿಷಯದಲ್ಲಿ ದಿನಕ್ಕೊಂದು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಎಐಎಂಎಂ ಚೀಫ್ ಅಸಾಸುದ್ದೀನ್ ಓವೈಸಿ ಅವರು ಇತ್ತೀಚೆಗೆ ಒಂದು ಸ್ಟೇಟ್ ಮೆಂಟ್ ಮಾಡಿದ್ದರು. ನಿಮ್ಮ ಸಮಸ್ಯೆಗಳನ್ನು ನೀವೇ ಪರಿಹರಿಸಿಕೊಳ್ಳಿ. ಭಾರತದ ಆಂತರಿಕ ವಿಚಾರಗಳಿಗೆ ಮೂಗು ತೂರಿಸಲು ಬರಬೇಡಿ ಎಂದು ಹೇಳಿದ್ದರು. ಇದೀಗ ಹಿಜಾಬ್ ಬಗ್ಗೆ ಮತ್ತೊಂದು ಹೇಳಿಕೆ ನೀಡಿರುವ ಅಸಾಸುದ್ದೀನ್ ಓವೈಸಿ, ಒಂದಲ್ಲ ಒಂದು ದಿನ ಹಿಜಾಬಿಯೇ ಭಾರತದ ಪ್ರಧಾನಿಯಾಗುತ್ತಾಳೆ ಎಂದಿದ್ದಾರೆ. ಹಿಜಾಬ್ ಧರಿಸುವ ಮಹಿಳೆ ಅಂದರೆ ಹಿಜಾಬಿ. ಉತ್ತರ ಪ್ರದೇಶದ ರ್ಯಾಲಿಯಲ್ಲಿ ಮಾತನಾಡುತ್ತಾ ಅವರು ಹಿಜಾಬ್ ಧರಿಸುವ ಹೆಣ್ಣುಮಕ್ಕಳು ಜಿಲ್ಲಾಧಿಕಾರಿಯಾಗಬಹುದು, ವೈದ್ಯರಾಗಬಹುದು ಅಷ್ಟೇ ಏಕೆ ? ಮುಂದೊಂದು ದಿನ ಈ ದೇಶದ ಪ್ರಧಾನಮಂತ್ರಿಯೂ ಆಗುತ್ತಾಳೆ ಎಂದೂ ಹೇಳಿದ್ದಾರೆ. ಈ ಹೇಳಿಕೆ ನೀಡಿರುವ ವೀಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ‌.

You may also like

Leave a Comment