Home » ಹಿಜಾಬ್ ಪ್ರಕರಣ : ವಿವಾದ ಸೃಷ್ಟಿಸಿದರೆ ಕಠಿಣ ಕ್ರಮ- ಸಿ ಎಂ ವಾರ್ನಿಂಗ್

ಹಿಜಾಬ್ ಪ್ರಕರಣ : ವಿವಾದ ಸೃಷ್ಟಿಸಿದರೆ ಕಠಿಣ ಕ್ರಮ- ಸಿ ಎಂ ವಾರ್ನಿಂಗ್

0 comments

ಹಿಜಾಬ್ ವಿಚಾರದಲ್ಲಿ ಯಾರಾದರೂ ವಿವಾದ ಸೃಷ್ಟಿಸಲು ಪ್ರಯತ್ನ ಪಟ್ಟರೆ ಅಂತವರ ಮೇಲೆ ನಿಗಾ ಇಡಲಾಗುವುದು ಹಾಗೂ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ನಾಳೆಯಿಂದ ಪ್ರೌಢಶಾಲೆಗಳನ್ನು ಪ್ರಾರಂಭಿಸುತ್ತೇವೆ. ನಾಳೆಯಿಂದ ಶಾಂತಿಯುತವಾಗಿ‌ ಎಲ್ಲಾ ತರಗತಿಗಳು ನಡೆಯಲಿದೆ. ಪರಿಸ್ಥಿತಿ ಎಲ್ಲಾ ನೋಡಿಕೊಂಡು ಕಾಲೇಜುಗಳ ಆರಂಭದ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.

ಈಗಾಗಲೇ ಜಿಲ್ಲಾಧಿಕಾರಿಗಳು, ಡಿಡಿಪಿಐ, ಶಾಲಾಡಳಿತ ಮಂಡಳಿಗಳಿಗೆ ಶಾಂತಿ ಸಭೆ ಮಾಡಲು ತಿಳಿಸಿದ್ದೇನೆ ಎಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. ಶಾಲಾ ಕಾಲೇಜುಗಳನ್ನು ಆರಂಭಿಸುವುದು ನಮ್ಮ ಮೊದಲ ಆದ್ಯತೆ. ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿಸುವವರ ಮೇಲೆ ನಿಗಾ ಇಡಲಾಗುವುದು ಎಂದು ಅವರು ಹೇಳಿದರು.

You may also like

Leave a Comment