Home » ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಎಂದ ಕಾಂಗ್ರೆಸ್ ನಾಯಕ !! | ಜೈನ ಸಮುದಾಯದಿಂದ ವ್ಯಾಪಕ ಆಕ್ರೋಶ

ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಎಂದ ಕಾಂಗ್ರೆಸ್ ನಾಯಕ !! | ಜೈನ ಸಮುದಾಯದಿಂದ ವ್ಯಾಪಕ ಆಕ್ರೋಶ

0 comments

ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಎಂದು ಭಗವಾನ್ ಬಾಹುಬಲಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನ್ಯೂ ಇಂಡಿಯನ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಖಾನ್‍ರನ್ನು ಉದಯಗಿರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಎಂದು ಅಯೂಬ್ ಖಾನ್ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜೈನ ಸಮುದಾಯ ಅಯೂಬ್ ಖಾನ್ ವಿರುದ್ಧ ಸಿಡಿದೆದ್ದಿದೆ. ಇದರೊಂದಿಗೆ ಅಯೂಬ್ ಖಾನ್ ಮೇಲೆ 50ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ಅಯೂಬ್ ಖಾನ್‍ರ ಅವಹೇಳನಕಾರಿ ಮಾತಿಗೆ ಜೈನ ಸಂಘಟನೆಗಳು ಕ್ರಿಮಿನಲ್ ಕೇಸ್ ದಾಖಲಿಸುವಂತೆ ಒತ್ತಾಯಿಸಿದೆ. ಇದಕ್ಕೆ ಮಣಿದ ಮೈಸೂರು ಪೊಲೀಸರು ಅಯೂಬ್ ಖಾನ್‍ರನ್ನು ಬಂಧಿಸಿದ್ದಾರೆ.

ಅಯೂಬ್ ಖಾನ್ ಹಿಜಬ್ ವಿಚಾರವಾಗಿ ಭಗವಾನ್ ಬಾಹುಬಲಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ, ದೇಶದ ಮಾನ ಉಳಿಸಿ ಎಂದಿದ್ದರು. ಈ ಹೇಳಿಕೆಗೆ ಜೈನ ಸಮುದಾಯ ಭಾರೀ ಆಕ್ರೋಶ ವ್ಯಕ್ತಪಡಿಸಿದೆ.

You may also like

Leave a Comment