Home » ಕಡಬ:ಆಕಸ್ಮಿಕವಾಗಿ ಗುಡ್ಡಕ್ಕೆ ಬೆಂಕಿ-ಸ್ಥಳೀಯರ ಹಾಗೂ ಪೊಲೀಸರ ನೆರವಿನಿಂದ ಬೆಂಕಿ ನಂದಿಸುವ ಕಾರ್ಯ

ಕಡಬ:ಆಕಸ್ಮಿಕವಾಗಿ ಗುಡ್ಡಕ್ಕೆ ಬೆಂಕಿ-ಸ್ಥಳೀಯರ ಹಾಗೂ ಪೊಲೀಸರ ನೆರವಿನಿಂದ ಬೆಂಕಿ ನಂದಿಸುವ ಕಾರ್ಯ

0 comments

ಟ್ರಾನ್ಸ್ ಫಾರ್ಮರ್ ಆಕಸ್ಮಿಕವಾಗಿ ಬಿದ್ದ ಕಿಡಿಯೊಂದು ಗುಡ್ಡ ಪ್ರದೇಶವನ್ನೇ ಸುಟ್ಟು ನಾಶ ಮಾಡಿದ ಘಟನೆ ಕಡಬ ತಾಲೂಕಿನ ಕಳಾರ ಎಂಬಲ್ಲಿ ನಡೆದಿದ್ದು,ಸ್ಥಳೀಯರ ಹಾಗೂ ಕಡಬ ಪೊಲೀಸರ ನೆರವಿನಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.

ಇಲ್ಲಿನ ಕಾರ್ ಶೋ ರೂಮ್ ಒಂದರ ಪಕ್ಕದಲ್ಲಿ ಘಟನೆ ನಡೆದಿದ್ದು,ಘಟನೆಯ ಬಗ್ಗೆ ತುರ್ತು ಸಹಾಯವಾಣಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸದೆ ಇದ್ದ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದ್ದು, ಅದಲ್ಲದೇ ವಾರದಲ್ಲಿ ಒಂದು ದಿನ ದುರಸ್ತಿ ನೆಪದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಇಲಾಖೆಯು ಕಂಬದಡಿಯಲ್ಲಿ ಇರುವ ಕಸ ಕಡ್ಡಿಗಳ ಬಗ್ಗೆ ಗಮನ ಹರಿಸದೆ ಇದ್ದುದರಿಂದ ಘಟನೆ ನಡೆದಿದೆ ಎನ್ನಲಾಗಿದೆ.

You may also like

Leave a Comment