Home » ಬಂಟ್ವಾಳ: ಯುವತಿಯ ಮಾನಭಂಗಕ್ಕೆ ಯತ್ನ,ಕೊಲೆ ಬೆದರಿಕೆ!! ಅಬ್ದುಲ್ ರಹಮಾನ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ: ಯುವತಿಯ ಮಾನಭಂಗಕ್ಕೆ ಯತ್ನ,ಕೊಲೆ ಬೆದರಿಕೆ!! ಅಬ್ದುಲ್ ರಹಮಾನ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

0 comments

ಬಂಟ್ವಾಳ:ಯುವತಿಯೊರ್ವಳ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನಿಸಿದಲ್ಲದೇ ಕೊಲೆಗೂ ಯತ್ನಿಸಿ ಬೆದರಿಕೆ ಒಡ್ಡಿರುವ ಬಗ್ಗೆ ಯುವತಿ ನೀಡಿರುವ ದೂರಿನಂತೆ ಮಂಚಿ ನಿವಾಸಿ ಅಬ್ದುಲ್ ರಹಮಾನ್ ಎಂಬಾತನ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಆರೋಪಿ ಅಬ್ದುಲ್ ರಹಮಾನ್ ಕಳೆದ ಒಂದು ವರ್ಷಗಳ ಹಿಂದೆ ಇರಾ ನಿವಾಸಿ ಯುವತಿಗೆ ಪರಿಚಯವಾಗಿದ್ದು ಇಬ್ಬರೂ ಪರಸ್ಪರ ಫೋನ್ ಮೂಲಕ ಮಾತನಾಡುತ್ತಿದ್ದರು.ಇದೇ ಮಾತು ಅಸಹ್ಯವಾಗಿ ಬೆಳೆದಿದ್ದು, ಅಬ್ದುಲ್ ರಹಮಾನ್ ಅಹಸ್ಯವಾಗಿ ಆಡುತ್ತಿದ್ದ ಮಾತಿನಿಂದ ಬೇಸತ್ತ ಯುವತಿ ಆತನ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಇದರಿಂದ ಕೋಪಗೊಂಡ ಆತ ಅವಾಚ್ಯ ಪದಗಳ ಬಳಸುತ್ತಿದ್ದ ಅಲ್ಲದೇ ಕೊಲೆ ಬೆದರಿಕೆ ನೀಡುತ್ತಿದ್ದ ಎಂದು ನೊಂದ ಯುವತಿ ಠಾಣೆ ಮೆಟ್ಟಿಲು ಏರಿದ್ದಾಳೆ.

You may also like

Leave a Comment