Home » ಹಿಜಾಬ್ ವಿವಾದ : ಈ ಸ್ಕೂಲಲ್ಲಿ ಇವಳೊಬ್ಬಳೇ ವಿದ್ಯಾರ್ಥಿನಿ| ಹಿಜಾಬ್ ಧರಿಸದೇ ಸ್ಕೂಲ್ ಗೆ ಬರಲು ಹಿಂದೇಟು ಹಾಕಿದ ಉಳಿದ ವಿದ್ಯಾರ್ಥಿನಿಯರು

ಹಿಜಾಬ್ ವಿವಾದ : ಈ ಸ್ಕೂಲಲ್ಲಿ ಇವಳೊಬ್ಬಳೇ ವಿದ್ಯಾರ್ಥಿನಿ| ಹಿಜಾಬ್ ಧರಿಸದೇ ಸ್ಕೂಲ್ ಗೆ ಬರಲು ಹಿಂದೇಟು ಹಾಕಿದ ಉಳಿದ ವಿದ್ಯಾರ್ಥಿನಿಯರು

0 comments

ಕರಾವಳಿಯಲ್ಲಿ ಹಿಜಾಬ್ ವಿವಾದ ಆರಂಭಗೊಂಡು ಹಲವು ದಿನಗಳೇ ಕಳೆದಿದೆ. ಹಲವಾರು ಗಲಾಟೆ ಪ್ರಕರಣ ನಡೆದಿದೆ. ಈಗ ಹಿಜಾಬ್ ಕೇಸರಿ ಶಾಲು‌ ವಿವಾದ ಈಗ ಕೋರ್ಟ್ ನಲ್ಲಿದೆ.

ಈ ಹಿಜಾಬ್ ವಿವಾದ ಈಗ ಶಾಲೆಯಲ್ಲಿ ಇರುವ ನಿಯಮಗಳಿಂದ ಬೇಸತ್ತಿರುವ ವಿದ್ಯಾರ್ಥಿನಿಯರು ಶಾಲೆಗೆ ಬರೋದಿಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಇದಕ್ಕೆ ಬಾಗಲಕೋಟೆಯ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕಂಡು ಬಂದ ದೃಶ್ಯವೇ ಇದಕ್ಕೆ ಸಾಕ್ಷಿ. ಸರಕಾರಿ ಬಾಲಕಿಯರ ಪ್ರೌಢಶಾಲೆಯ ಉರ್ದು ವಿವಾದದಿಂದ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗುತ್ತಿಲ್ಲ.

ಮನೆಯಿಂದ ಹಿಜಾಬ್ ಧರಿಸಿಕೊಂಡು ಬರುವುದು ಪುನಃ ಶಾಲೆಯಲ್ಲಿ ಅದನ್ನು ತೆಗೆಯೋದು‌ ಈ ಎಲ್ಲ ಮುಜುಗರ ಯಾಕೆ ಅಂತ ವಿದ್ಯಾರ್ಥಿನಿಯರು‌ ಶಾಲೆಗೆ ಹೋಗದೆ ಇರೋದೆ ಒಳ್ಳೆಯದು ಅಂತ ವಿದ್ಯಾರ್ಥಿನಿಯರು, ಪೋಷಕರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದೆ.

ಈ ಶಾಲೆಗೆ ಬಂದ ಏಕೈಕ ವಿದ್ಯಾರ್ಥಿನಿ ಜಬೀನ್ ಮಕಾಂದಾರ,”ಕ್ಲಾಸ್ ಗೆ ನಾನೊಬ್ಬಳೇ ಬಂದಿದ್ದೇನೆ. ನನ್ನ ಸ್ನೇಹಿತರ ಯಾರೂ ಬಂದಿಲ್ಲ. ಇದು ಬೇಸರ ತರಿಸಿದೆ. ಯಾವುದೇ ಭಯ ಪಡದೇ ಕ್ಲಾಸ್ ಗೆ ಬನ್ನಿ ” ಅಂತ ಆಕೆಯ ಸಹಪಾಠಿಗಳಿಗೆ ಮನವಿ ಮಾಡಿದ್ದಾರೆ.

ಒಟ್ಟಾರೆ ರಾಜ್ಯಾದ್ಯಂತ ಭುಗಿಲೆದ್ದ ಹಿಜಾಬ್ ವಿವಾದ ಮಕ್ಕಳ ಶೈಕ್ಷಣಿಕ ಬದುಕಿಗೆ ಕಂಠಕವಾಗದೇ ಇರಲಿ. ಆದಷ್ಟು ಬೇಗ ಈ ವಿವಾದ ಮುಗಿದು ಮಕ್ಕಳು ಮತ್ತೆ ಶಾಲೆ ಕಾಲೇಜುಗಳಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆಯುವಂತಾಗಲಿ.

You may also like

Leave a Comment