Home » ಲಾಟರಿ ಟಿಕೆಟ್ ನೀಡಿದವನಿಗೆ ತಾನು ಗೆದ್ದ ಅರ್ಧ ಹಣ ನೀಡಿದ ವೃದ್ಧೆ| ಮಾರಾಟಗಾರನ ಕಣ್ಣಲ್ಲಿ ಆನಂದಭಾಷ್ಪ| ಅಜ್ಜಿಯ ಉದಾರತೆಗೆ ಭರಪೂರ ಮೆಚ್ಚುಗೆ

ಲಾಟರಿ ಟಿಕೆಟ್ ನೀಡಿದವನಿಗೆ ತಾನು ಗೆದ್ದ ಅರ್ಧ ಹಣ ನೀಡಿದ ವೃದ್ಧೆ| ಮಾರಾಟಗಾರನ ಕಣ್ಣಲ್ಲಿ ಆನಂದಭಾಷ್ಪ| ಅಜ್ಜಿಯ ಉದಾರತೆಗೆ ಭರಪೂರ ಮೆಚ್ಚುಗೆ

0 comments

ಇತ್ತೀಚೆಗಷ್ಟೇ ಮರಿಯನ್ ಫಾರೆಸ್ಟ್ ಎಂಬ ವೃದ್ಧೆಯೊಬ್ಬರು 300 ಡಾಲರ್ ನ ಲಾಟರಿಯನ್ನು ಗೆದ್ದಿದ್ದರು. ಲಾಟರಿ ಹೊಡೆದ ಸುದ್ದಿ ತಿಳಿದ ಕೂಡಲೇ ಅವರು ಲಾಟರಿ ಟಿಕೆಟ್ ಮಾರಿದಾತನ ಬಳಿ ಹೋಗಿ ತಮಗೆ ಸಿಕ್ಕ ಹಣದಲ್ಲಿ ಅರ್ಧವನ್ನು ಟಿಕೆಟ್ ಮಾರಿದವನಿಗೆ ನೀಡಿದ್ದಾರೆ. ಇದನ್ನು ಕಂಡು ಟಿಕೆಟ್ ಮಾರುವವ ಕಣ್ಣಲ್ಲಿ ನೀರಿನಲೆ ತೇಲಿ ಬಂದಿದೆ. ಭಾವುಕನಾಗಿದ್ದಾನೆ.

ಈ ಘಟನೆ ನಡೆದಿರುವುದು ಯುಎಸ್ ನಲ್ಲಿ.

ಮರಿಯನ್ ಫಾರೆಸ್ಟ್ ಅವರು ಡ್ಯೂಕ್ ನ ಮಿನಿ ಮಾರ್ಕ್ ಗೆ ದಿನವೂ ಬರುವ ಗ್ರಾಹಕರಾಗಿದ್ದರು‌. ಹಾಗಾಗಿ ಅಲ್ಲಿನ ಕ್ಯಾಷಿಯರ್ ಆಗಿದ್ದ ವಾಲ್ಟರ್ ಲಾಟರಿ ಟಿಕೆಟ್ ಖರೀದಿಸುವಂತೆ ಮನವಿ ಮಾಡಿದ್ದಾನೆ. ಹಾಗಾಗಿ ಅಜ್ಜಿ ಟಿಕೆಟ್ ಖರೀದಿಸಿದ್ದಾರೆ. ಈ ಸಂದರ್ಭದಲ್ಲಿ ಮರಿಯನ್ ಫಾರೆಸ್ಟ್ ಅವರು ತಾವು ಲಾಟರಿ ಟಿಕೆಟ್ ಗೆದ್ದರೆ, ಅದರ ಅರ್ಧದಷ್ಟು ಹಣವನ್ನು ನಿನಗೆ ನೀಡುವುದಾಗಿ ಕ್ಯಾಷಿಯರ್ ಗೆ ಹೇಳಿದ್ದಾರೆ. ಇದನ್ನು ತಮಾಷೆ ಎಂದುಕೊಂಡ ವ್ಯಕ್ತಿ ಆಯಿತು ಎಂದಿದ್ದಾನೆ. ಆದರೆ ಮರಿಯನ್ ಫಾರೆಸ್ಟ್ ಅವರಿಗೆ ಯಾವಾಗ 300 ಡಾಲರ್ ಲಾಟರಿ ಹೊಡೆಯಿತೋ, ಅಂದರೆ ಭಾರತೀಯ ರೂಪಾಯಿ ಪ್ರಕಾರ ಅಂದಾಜು 22000 ಅದರಲ್ಲಿ ಅರ್ಧದಷ್ಟು ಹಣವನ್ನು ಅವರು ಹೇಳಿದಾಗೆ ಕ್ಯಾಷಿಯರ್ ಗೆ ಕೊಟ್ಟಿದ್ದಾರೆ.

You may also like

Leave a Comment