Home » ರೈಲು ಹಳಿಗಳ ಮೇಲೆ ಸೆಲ್ಫೀ ತೆಗೆಯಲು ಹೋದ ನಾಲ್ವರು ಯುವಕರ ಪ್ರಾಣ ಪಕ್ಷಿ ಕ್ಷಣಾರ್ಧದಲ್ಲಿ ಹೋಯಿತು| ಮುಗಿಲು ಮುಟ್ಟಿದೆ ಪೋಷಕರ ಆಕ್ರಂದನ

ರೈಲು ಹಳಿಗಳ ಮೇಲೆ ಸೆಲ್ಫೀ ತೆಗೆಯಲು ಹೋದ ನಾಲ್ವರು ಯುವಕರ ಪ್ರಾಣ ಪಕ್ಷಿ ಕ್ಷಣಾರ್ಧದಲ್ಲಿ ಹೋಯಿತು| ಮುಗಿಲು ಮುಟ್ಟಿದೆ ಪೋಷಕರ ಆಕ್ರಂದನ

0 comments

ಇತ್ತೀಚಿನ ಮಕ್ಕಳಲ್ಲಿ ಸೆಲ್ಫೀ ಹುಚ್ಚು ತುಂಬಾ ಇದೆ. ಎಲ್ಲಿ ನೋಡಿದರಲ್ಲಿ ಸೆಲ್ಫಿ ಕ್ಲಿಕ್ಕಿಸುತ್ತಾ ಅದಕ್ಕೆ ಬರುವ ಕಮೆಂಟ್ , ಲೈಕ್ಸ್ ಗಳೇ ಮುಖ್ಯ ಎನ್ನುವಂತಿದೆ ಈಗಿನ ಕಾಲದ ಯುವ ಜನಾಂಗ. ಇದೇ ಸೆಲ್ಫಿ ಗೀಳಿನಿಂದ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡದ್ದು ಕೂಡಾ ಇದೆ. ಈಗ ಅಂಥದ್ದೇ ಒಂದು ಘಟನೆ ದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ. ರೈಲು ಹಳಿಗಳ ಮೇಲೆ ಸೆಲ್ಫಿ ತೆಗೆದು ದುಸ್ಸಾಹಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ರೈಲು ಹಳಿಗಳ ಮೇಲೆ ಸೆಲ್ಫಿ ತೆಗೆಯಲು ಹೋಗಿದ್ದಾರೆ ಈ ಯುವಕರು. ಅಷ್ಟು ಮಾತ್ರವಲ್ಲ. ರೈಲು ಬರುವಾಗ ರೈಲು ಬುರುವುದರ ಜೊತೆಗೆ ಸೆಲ್ಫಿ ತೆಗೆದರೆ ಚೆನ್ನಾಗಿ ಬರುತ್ತದೆ ಎಂದು ಹಳಿಯ ಮೇಲೆ ನಿಂತಿದ್ದ ನಾಲ್ವರು ಯುವಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ದೆಹಲಿಯ ಸುರಾಯ್ ರೋಹಿಲ್ಲಾದಿಂದ ರಾಜಸ್ಥಾನದ ಅಜ್ಮೀರ್ ಗೆ ಹೋಗುವ ಜನ ಶತಾಬ್ದಿ ಎಕ್ಸ್ ಪ್ರೆಸ್ ಗುರುವಾರ ರೈಲು ನಿಲ್ದಾಣದಿಂದ ಬಸಾಯಿ ರೈಲು ನಿಲ್ದಾಣದ ಕಡೆಗೆ ಚಲಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಮೃತರನ್ನು ದೇವಿಲಾಲ್ ಕಾಲೊನಿಯ ಸಮೀರ್( 19), ಮೊಹಮ್ಮದ್ ಅನಸ್( 20), ಯೂಸುಫ್ ಅಲಿಯಾಸ್ ಭೋಲಾ ( 21) ಮತ್ತು ಯುವರಾಜ್ ಗೋಗಿಯಾ ( 18) ಎಂದು ಗುರುತಿಸಲಾಗಿದೆ.

You may also like

Leave a Comment