Home » ಕಡಬ: ಅಕ್ರಮ ಜಾನುವಾರು ಸಾಗಾಟ ಪತ್ತೆ!! ಪೊಲೀಸರನ್ನು ಕಂಡು ಎಸ್ಕೇಪ್ ಆಗುವ ಭರದಲ್ಲಿ ಮನೆಯಂಗಳಕ್ಕೆ ನುಗ್ಗಿದ ವಾಹನ

ಕಡಬ: ಅಕ್ರಮ ಜಾನುವಾರು ಸಾಗಾಟ ಪತ್ತೆ!! ಪೊಲೀಸರನ್ನು ಕಂಡು ಎಸ್ಕೇಪ್ ಆಗುವ ಭರದಲ್ಲಿ ಮನೆಯಂಗಳಕ್ಕೆ ನುಗ್ಗಿದ ವಾಹನ

0 comments

ಕಡಬ: ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದವರನ್ನು ಪತ್ತೆ ಹಚ್ಚಿದ ಪೊಲೀಸರು, ವಾಹನವನ್ನು ಬೆನ್ನಟ್ಟಿ ಹಿಡಿದ ಘಟನೆ ಕೇಪು ಎಂಬಲ್ಲಿ ನಡೆದಿದೆ.

ಕಡಬದ ಇಬ್ಬರು ವ್ಯಕ್ತಿಗಳು ಕೋಡಿಂಬಾಳ ಮೂಲದ ಚಾಲಕನ ಪಿಕ್ಅಪ್ ವಾಹನದಲ್ಲಿ ನೆಲ್ಯಾಡಿ ಕಡೆಗೆ ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುತ್ತಿದ್ದ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಬೆನ್ನಟ್ಟಿದ್ದಾರೆ.

ಪೊಲೀಸರನ್ನು ಕಂಡೊಡನೆ ಆರೋಪಿಗಳು ವಾಹನವನ್ನು ಅಲ್ಲಿಯೇ ಪಕ್ಕದ ಮನೆಯ ಅಂಗಳಕ್ಕೆ ನುಗ್ಗಿಸಿದ್ದು, ಕೂಡಲೇ ಪೊಲೀಸರು ಇಬ್ಬರು ಆರೋಪಿಗಳ ಸಹಿತ ಜಾನುವಾರುಗಳಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment