6
ಮದುವೆಯ ಮನೆಯಲ್ಲಿ ನಡೆಯುವ ಅದೊಂದು ಸಂಪ್ರಯದಾಯ ಭೀಕರ ದುರಂತಕ್ಕೆ ಕಾರಣವಾಗಿದ್ದು, ಮದುವೆಯ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಉತ್ತರಪ್ರದೇಶದ ಕುಶಿ ನಗರ ಜಿಲ್ಲೆಯ ಮದುವೆ ಮನೆಯೊಂದರಲ್ಲಿ ಈ ದುರಂತ ಸಂಭವಿಸಿದ್ದು ಸಂಪ್ರದಾಯದ ಪ್ರಕಾರ ಗಂಗಾ ಪೂಜೆ ನೆರವೇರುವ ವೇಳೆ ಹನ್ನೊಂದು ಮಂದಿ ಬಾವಿ ಪಾಲಾಗಿದ್ದಾರೆ.
ಪೂಜೆಯ ನಿಮಿತ್ತ ಬಾವಿಯ ಕಟ್ಟೆಯಲ್ಲಿ ಕುಳಿತಿದ್ದ ವೇಳೆ ಭಾರ ಹೆಚ್ಚಾಗಿ ತಡೆಗೋಡೆ ಕುಸಿದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಹನ್ನೊಂದು ಮಂದಿ ಜಲಸಮಾಧಿಯಾಗಿದ್ದಾರೆ.
