Home » ಉತ್ತರಪ್ರದೇಶ ಚುನಾವಣಾಧಿಕಾರಿಯ ಸ್ಟೈಲಿಶ್ ಲುಕ್ | ಸೆನ್ಸೇಶನ್ ಹುಟ್ಟುಹಾಕಿದ ಮಹಿಳೆಯ ಮೈಮಾಟಕ್ಕೆ ಮನಸೋತ ಮಂದಿ

ಉತ್ತರಪ್ರದೇಶ ಚುನಾವಣಾಧಿಕಾರಿಯ ಸ್ಟೈಲಿಶ್ ಲುಕ್ | ಸೆನ್ಸೇಶನ್ ಹುಟ್ಟುಹಾಕಿದ ಮಹಿಳೆಯ ಮೈಮಾಟಕ್ಕೆ ಮನಸೋತ ಮಂದಿ

0 comments

ಉತ್ತರಪ್ರದೇಶದ ಮಹಿಳಾ ಚುನಾವಣಾ ಮತಗಟ್ಟೆ ಅಧಿಕಾರಿ ಈ ರೀನಾ ದ್ವಿವೇದಿ. ತುಂಬಾ ಜನರಿಗೆ ಈ ಹೆಸರು ನೆನಪಿರಬಹುದು. 2017 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ, ನಂತರ 2019 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಭಾರೀ ಸುದ್ದಿ ಮಾಡಿದಂತಹ ಮಹಿಳೆ.

2019 ರ ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಯಾವುದೇ ಸೆಲೆಬ್ರಿಟಿಗಿಂತಲೂ ಕಮ್ಮಿಯಿಲ್ಲದಂತೆ ಡ್ರೆಸ್ ಮಾಡಿಕೊಂಡು ಬಂದಿದ್ದ ಈಕೆ ಮುಗುಳುನಗುತ್ತಾ ಕೂಲಿಂಗ್ ಗ್ಲಾಸ್ ಧರಿಸಿ ಮತಪೆಟ್ಟಿಗೆಯೊಂದಿಗೆ ಸ್ಮೈಲ್ ಕೊಟ್ಟು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು ಈ ಫೋಟೋ.

ಇಂದು ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ 4 ನೇ ಹಂತದ ಮತದಾನ ನಡೆಯುತ್ತಿದ್ದಲ್ಲಿಗೆ ನಿನ್ನೆ ಮತಪೆಟ್ಟಿಗೆಯೊಂದಿಗೆ ಬಂದಿದ್ದ ರೀನಾ ದ್ವಿವೇದಿ ಈ ಬಾರಿ ಕೂಡಾ ಸಖತ್ ಮಿಂಚಿಂಗ್. ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

ಈ ಬಾರಿ ತುಂಬಾ ಸ್ಟೈಲಿಷ್ ಆಗಿ ತೋಳಿಲ್ಲದ ಕಪ್ಪು ಟಾಪ್ ಮತ್ತು ಬೀಜ್ ಪ್ಯಾಂಟ್. ಅವರ ಈ ಸುಂದರತೆಗೆ ಎಲ್ಲರೂ ಮನಸೋತಿದ್ದಾರೆ‌. ಒಟ್ಟಾರೆ ಎಲ್ಲರ ದೃಷ್ಟಿ ರೀನಾ ಮೇಲೆ ನೆಟ್ಟಿದೆ.

ರೀನಾ ದ್ವಿವೇದಿಯವರು ಲಕ್ನೋದಲ್ಲಿ ಲೋಕೋಪಯೋಗಿ ಇಲಾಖೆ ಯಲ್ಲಿ ಹಿರಿಯ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ನಡೆಯುತ್ತಿರುವ 4 ನೇ ಹಂತದ ಮತದಾನದಲ್ಲಿ ಮೊಹನ್ಸಾಲ್ ಗಂಜ್ ಮತಗಟ್ಟೆ ಕೇಂದ್ರದ ಬಸ್ತಿಯಾನ್ ಗೊಸೈಗಂಜ್ 114 ಎಂಬಲ್ಲಿ ಮತಗಟ್ಟೆ ಅಧಿಕಾರಿಯಾಗಿ ಡ್ಯೂಟಿ ಮಾಡುತ್ತಿದ್ದಾರೆ.

ನಿನ್ನೆ ಸಾಯಂಕಾಲ ಆಶಿಯಾನ ಮತಕೇಂದ್ರದ ಸ್ಮೃತಿ ಉಪವನಕ್ಕೆ ಬಂದ ಕೂಡಲೇ ಅಲ್ಲಿದ್ದ ಹಲವು ಪೊಲೀಸರು ಮತ್ತು ಪಾರಾ ಮಿಲಿಟರಿ ಪಡೆ ಸಿಬ್ಬ ರೀನಾ ದ್ವಿವೇದಿಯವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.

You may also like

Leave a Comment