Home » ಉಳ್ಳಾಲ:ಪ್ರಿಯಕರನೊಂದಿಗೆ ಫೋನ್ ನಲ್ಲಿ ಮಾತಾಡುತ್ತಿದ್ದಾಗಲೇ ನೇಣಿಗೆ ಶರಣಾದ ಪ್ರೇಯಸಿ|ಆಸ್ಪತ್ರೆಗೆ ಸಾಗಿಸಿದರು ಚಿಕಿತ್ಸೆ ಫಲಿಸದೆ ಮೃತ್ಯು

ಉಳ್ಳಾಲ:ಪ್ರಿಯಕರನೊಂದಿಗೆ ಫೋನ್ ನಲ್ಲಿ ಮಾತಾಡುತ್ತಿದ್ದಾಗಲೇ ನೇಣಿಗೆ ಶರಣಾದ ಪ್ರೇಯಸಿ|ಆಸ್ಪತ್ರೆಗೆ ಸಾಗಿಸಿದರು ಚಿಕಿತ್ಸೆ ಫಲಿಸದೆ ಮೃತ್ಯು

0 comments

ಉಳ್ಳಾಲ:ಯುವತಿಯೋರ್ವಳು ಪ್ರೀತಿಯಲ್ಲಿ ಮನಸ್ತಾಪವಾಗಿ ಪ್ರಿಯಕರನೊಂದಿಗೆ ಫೋನಿನಲ್ಲಿ ಮಾತಾಡುತಿದ್ದ ವೇಳೆಯೇ ನೇಣಿಗೆ ಕೊರಳೊಡ್ಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕುಂಪಲ ಬಲ್ಯ ಎಂಬಲ್ಲಿ ನಡೆದಿದೆ.

ಮೃತರು ಕುಂಪಲ ಬಲ್ಯ ನಿವಾಸಿ ಹರ್ಷಿತ (21)ಎಂದು ತಿಳಿದುಬಂದಿದೆ.

ಹರ್ಷಿತ ನಿನ್ನೆ ಮಧ್ಯಾಹ್ನ ತನ್ನ ಬಲ್ಯದ ಮನೆಯೊಳಗೆ
ಪ್ರಿಯಕರನೊಂದಿಗೆ ಮೊಬೈಲ್ ಫೋನಲ್ಲಿ ಮಾತನಾಡುತ್ತಳೇ ಸಿಲಿಂಗ್ ಫ್ಯಾನಿಗೆ ಚೂಡಿದಾರ್ ಶಾಲಿನಿಂದ ನೇಣು ಹಾಕಿ ಕೊರಳೊಡ್ಡಿದ್ದಾಳೆ.ಆಕೆಯ ಮನೆ ಹತ್ತಿರದವನೇ ಆದ ಪ್ರಿಯಕರ ಬಲ್ಯ ಬ್ಯಾಂಕ್ ಕಾಲನಿ ನಿವಾಸಿಯಾಗಿದ್ದು,ಆತ ತಕ್ಷಣ ಆಕೆಯನ್ನ ಇಳಿಸಿ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದ್ದಾನೆ.

ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತ ಕೊನೆಯುಸಿರೆಳೆದಿದ್ದಾಳೆ.ಮೃತ ಹರ್ಷಿತ ಮತ್ತು ಪ್ರಿಯಕರನ ಮಧ್ಯೆ ಜಗಳ ಉಂಟಾಗಿದ್ದು ಈ ಬಗ್ಗೆನೇ ಫೋನಲ್ಲಿ ಮಾತನಾಡುತ್ತಲೇ ನೇಣು ಬಿಗಿದಿರುವುದಾಗಿ ಹೇಳಲಾಗುತ್ತಿದ್ದು, ಸಾವಿನ ಬಗ್ಗೆ ಹಲವು ಅನುಮಾನಗಳೂ ಇದ್ದು ಪೊಲೀಸರು ಪ್ರಿಯಕರನ ವಿಚಾರಣೆ ನಡೆಸುತ್ತಿದ್ದಾರೆ.

ಮೃತ ಹರ್ಷಿತ ಪೋಷಕರಿಗೆ ಏಕೈಕ ಮಗಳಾಗಿದ್ದು, ಆಕೆಯ ತಂದೆ ಗಂಗಾಧರ್ ಗಾಣಿಗ ಅವರು ಐದು ವರುಷಗಳ ಹಿಂದಷ್ಟೆ ಹಾವು ಕಡಿದು ಮೃತ ಪಟ್ಟಿದ್ದರು.ಇದೀಗ ಮಗಳನ್ನು ಕಳೆದುಕೊಂಡು ತಾಯಿ ಗೀತಾ ಅನಾಥರಾಗಿದ್ದಾರೆ.ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.

You may also like

Leave a Comment