Home » ತರಬೇತಿ ವಿಮಾನ ಪತನ| ಮಹಿಳಾ ಪೈಲೆಟ್, ತರಬೇತಿ‌ ನಿರತ ಪೈಲಟ್ ದಾರುಣ ಸಾವು

ತರಬೇತಿ ವಿಮಾನ ಪತನ| ಮಹಿಳಾ ಪೈಲೆಟ್, ತರಬೇತಿ‌ ನಿರತ ಪೈಲಟ್ ದಾರುಣ ಸಾವು

0 comments

ತರಬೇತಿ ನಿರತ ವಿಮಾನವೊಂದು ಪತನಗೊಂಡು ಅದರಲ್ಲಿದ್ದ ಮಹಿಳಾ ಪೈಲೆಟ್ ಮತ್ತು ತರಬೇತಿ ನಿರತ ಪೈಲೆಟ್ ಇಬ್ಬರೂ‌ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ತೆಲಂಗಾಣದಲ್ಲಿ ನಡೆದಿದೆ.

ನಲ್ಗೊಂಡ ಜಿಲ್ಲೆಯ ಪೆದ್ದಾಪುರ ಮಂಡಲದ ತುಂಗತ್ತುರಿ ಸಮೀಪ ವಿಮಾನವು ಕೆಳಕ್ಕೆ ಬಿದ್ದಿದ್ದು, ಬೆಂಕಿ ಹೊತ್ತಿಕೊಂಡು ಉರಿದಿದೆ. ಸ್ಥಳದಲ್ಲೇ ಪೈಲೆಟ್ ಮತ್ತು ಟ್ರೈನಿ ಪೈಲಟ್ ಮೃತಪಟ್ಟಿದ್ದಾರೆ.

ವಿಮಾನ ಕೆಳಗೆ ಬಿದ್ದ ಶಬ್ದಕ್ಕೆ ರೈತರು ಒಮ್ಮೆಲೇ ಬೆಚ್ಚಿಬಿದ್ದಿದ್ದು, ಶಬ್ದ ಬಂದ ಕಡೆ ನೋಡಿದಾಗ ದಟ್ಟ ಹೊಗೆ ಬೆಂಕಿ‌ ಜ್ವಾಲೆ ಕಂಡಿದೆ. ಹತ್ತಿರ ಹೋಗಿ ನೋಡಿದಾಗ ವಿಮಾನ ಹೊತ್ತಿ ಉರಿಯುತ್ತಿತ್ತು. ಚೀರಾಟದ ಶಬ್ದ ಕೇಳುತ್ತಿದ್ದು, ಸ್ವಲ್ಪ ಹೊತ್ತಲ್ಲಿ ಚೀರಾಟ ನಿಂತಿದ್ದಾಗಿ ರೈತರು ಹೇಳಿದ್ದಾರೆ.

You may also like

Leave a Comment