Home » 9 ನೇ ತರಗತಿ ವಿದ್ಯಾರ್ಥಿನಿ ಕೊಲೆ ರಹಸ್ಯ ಬಯಲು| ಮದುವೆ ಕಾರಣಕ್ಕೆ ಕೊಲೆಯಾದಳೇ ಬಾಲಕಿ?

9 ನೇ ತರಗತಿ ವಿದ್ಯಾರ್ಥಿನಿ ಕೊಲೆ ರಹಸ್ಯ ಬಯಲು| ಮದುವೆ ಕಾರಣಕ್ಕೆ ಕೊಲೆಯಾದಳೇ ಬಾಲಕಿ?

0 comments

9 ನೇ ತರಗತಿ ವಿದ್ಯಾರ್ಥಿನಿಯೋರ್ವಳನ್ನು ಶಾಲೆಯಿಂದ ವಾಪಾಸು ಬರುತ್ತಿರುವಾಗ ಶುಕ್ರವಾರ ಸಂಜೆ ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದಲ್ಲಿಈ ಘಟನೆ ನಿನ್ನೆ ನಡೆದಿತ್ತು. ಆದರೆ ಈ ಕೊಲೆಗೆ ಕಾರಣ ನಿಗೂಢವಾಗಿಯೇ ಉಳಿದಿತ್ತು. ಈಗ ಈ ಕೊಲೆಯ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ.

ರಮೇಶ್ ಎಂಬ 28 ವರ್ಷದ ಯುವಕನೇ ಈಕೆಯ ಹತ್ಯೆ ಮಾಡಿರುವುದಾಗಿ ಆರೋಪಿಸಲಾಗಿದೆ. ಭೂಮಿಕಾ ರಮೇಶ್ ನ ಸೋದತ್ತೆಯ ಮಗಳು. ಕಳೆದೊಂದು ವರ್ಷದಲ್ಲಿ ರಮೇಶ್ ಬಾಲಕಿಯನ್ನು ಪ್ರೀತಿಸುತ್ತಿದ್ದ. ಆದರೆ ಸಗೋತ್ರ ಇರುವ ಕಾರಣ ಭೂಮಿಕಾ ಕುಟುಂಬಸ್ಥರು ಮದುವೆಯನ್ನು ನಿರಾಕರಿಸಿದ್ದರೆನ್ನಲಾಗಿದೆ.

ನಿನ್ನೆ ಬೆಂಗಳೂರಿನಿಂದ ಮಸ್ಕಿಗೆ ಬಂದಿದ್ದ ರಮೇಶ ಶಾಲೆಗೆ ಹೋಗಿದ್ದ ಭೂಮಿಕಾಳನ್ನು ಕರೆದುಕೊಂಡು ಬರುವುದಾಗಿ ಹೇಳಿದ್ದಾನೆ. ಅನಂತರ ಹಲ್ಲೆಮಾಡಿ ಮದುವೆಯಾಗು ಎಂಬುದಾಗಿ ಪೀಡಿಸಿದ್ದಾನೆ. ಆಕೆ ನಿರಾಕರಿಸಿದಾಗ ಆಕೆಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ.

ಭೂಮಿಕಾ ಬೊಬ್ಬೆ ಹೊಡೆಯುತ್ತಾ ನಿರ್ಜನ ಪ್ರದೇಶದಿಂದ ಮುಖ್ಯ ರಸ್ತೆಗೆ ಓಡಿ ಬಂದು ಒದ್ದಾಡಿ ಪ್ರಾಣಬಿಟ್ಟಿದ್ದಾಳೆ.

ಈ ಸಂಬಂಧ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment