Home » ಕಡಬ :ಅಡೆಂಜಾ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ದರ್ಮಸ್ಥಳ ಯೋಜನೆಯಿಂದ ಅನುದಾನ ವಿತರಣೆ.

ಕಡಬ :ಅಡೆಂಜಾ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ದರ್ಮಸ್ಥಳ ಯೋಜನೆಯಿಂದ ಅನುದಾನ ವಿತರಣೆ.

0 comments

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮೋತ್ತಾನ ಟ್ರಸ್ಟ್ ವತಿಯಿಂದ ರೂ ಎರಡು ಲಕ್ಷದ ಅನುದಾನದ ಡಿ ಡಿ ಯನ್ನು ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ವಿಮಾ ವಿಭಾಗದ ಪ್ರಾದೇಶಿಕ ನಿರ್ಧೇಶಕರಾದ ಜಯರಾಮ ನೆಲ್ಲಿತ್ತಾಯರವರು ವಿತರಿಸಿದರು.


ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು. ವಿಮಾ ವಿಭಾಗದ ಹಿರಿಯ ಪ್ರಭಂಧಕರಾದ ಉದಯ ಕುಮಾರ್ ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ನೂಜಿಬಾಳ್ತಿಲ ದ ಸೇವಾಪ್ರತಿನಿಧಿ ಗೀತಾ ಒಕ್ಕೂಟ ಅಧ್ಶಕ್ಷರಾದ ಪುರುಶೋತ್ತಮ ಮಿತ್ತಂಡೇಲ್ ˌಕಾರ್ಯದರ್ಶಿ ಸೀತರಾಮ ಬಳ್ಳಕ ಹಾಗೂ ದೇವಸ್ಥಾನ ಕಮಿಟಿ ಮತ್ತು ಜೀರ್ಣೋದ್ದಾರ ಸಮಿತಿ ಪಧಾದಿಕಾರಿಗಳು ಉಪಸ್ಥಿತರಿದ್ದರು .ದೇವಸ್ಥಾನ ಕಮಿಟಿ ಅಧ್ಶಕ್ಷರಾದ ಕರುಣಾಕರ ಈಚಿಲಡ್ಕ ಜೀರ್ಣೋದ್ದಾರ ಸಮಿತಿ ಅಧ್ಶಕ್ಷರಾದ ಅನೀಲ್ ಕುಮಾರ್ ಕೇರ್ನಡ್ಕ ರವರು ರೂ ಎರಡು ಲಕ್ಷದ ಡಿ ಡಿ ಯನ್ನು ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಅರ್ಚಕರಾದ ಬಾಲಚಂದ್ರ ಕಾಂಚಿತ್ತಾಯರವರ ನೇತೃತ್ವದಲ್ಲಿ ಜಯರಾಮ ನೆಲ್ಲಿತ್ತಾಯರವರು ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಪ್ರತಿಷ್ಟಾ ವಾರ್ಷಿಕೊತ್ಸವ ಮತ್ತು ಜಾತ್ರೋತ್ಸವ ಹಾಗೂ ಮಹಾಶಿವರಾತ್ರಿ ಉತ್ಸವದ ಆಮಂತ್ರಣಾ ಪತ್ರಿಕೆಯನ್ನು ಬಿಡುಗಡೆ ಮಾಡಿ ಶುಭಹಾರೈಸಿದರು

You may also like

Leave a Comment