Home » ಸುಳ್ಯ : ಕೊಲ್ಲಮೊಗ್ರದಲ್ಲಿ ಕೆಂಪು ಬಟ್ಟೆ ಹಾಕಿದವರನ್ನು ಕಂಡೊಡನೆ ತಿವಿಯಲು ಬರುತ್ತಿರುವ ಹೋರಿಗಳು

ಸುಳ್ಯ : ಕೊಲ್ಲಮೊಗ್ರದಲ್ಲಿ ಕೆಂಪು ಬಟ್ಟೆ ಹಾಕಿದವರನ್ನು ಕಂಡೊಡನೆ ತಿವಿಯಲು ಬರುತ್ತಿರುವ ಹೋರಿಗಳು

by Praveen Chennavara
0 comments

ಸುಳ್ಯ : ಕೊಲ್ಲಮೊಗ್ರು ಪೇಟೆಯಾದ್ಯಂತ ವಾರಿಸುದಾರರಿಲ್ಲದ 6-7 ಹೋರಿಗಳು ಕಂಡುಬಂದಿದ್ದು ಕೆಲವು ಹೋರಿಗಳು ತಿವಿಯಲು ಬರುತ್ತಿವೆ.ಕೆಂಪು ಡ್ರೆಸ್ ನೋಡಿದರೆ ಬೆನ್ನಟ್ಟಿ ಬರುತ್ತಿರುವ ಹೋರಿಯನ್ನು ನೋಡಿ ಸಾರ್ವಜನಿಕರು, ವಿದ್ಯಾರ್ಥಿಗಳುತೊಂದರೆಗೊಳಗಾಗಿದ್ದಾರೆ.

ಶಾಲಾ ಮಕ್ಕಳು ಇದರಿಂದ ಭಯಗೊಂಡಿದ್ದು, ಕೊಲ್ಲಮೊಗ್ರದ ಬಂಗ್ಲೆಗುಡ್ಡೆ ಹಿ.ಪ್ರಾ ಶಾಲೆಗೆ ಬರುವ ವಿದ್ಯಾರ್ಥಿಗಳು ಮನವಿ ಮಾಡಿದ್ದು, ಹೋರಿ ತಿವಿಯುವ ಭಯದಲ್ಲಿ ಶಾಲೆಗೆ ಬರಲಾಗುತ್ತಿಲ್ಲ ಎಂದು ಶಾಲಾ ಆಡಳಿತ ಮಂಡಳಿಗೆ ಮನವಿ ನೀಡಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ತಹಶಿಲ್ದಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಗ್ರಾ.ಪಂ ಗೆ ಶಾಲೆಯಿಂದ ಮನವಿ ನೀಡಲಾಗಿದೆ ಎಂದು ಶಾಲೆಯವರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಕೊಲ್ಲಮೊಗ್ರು ಹಾಲು ಉತ್ಪಾದಕರ ಸಂಘದಿಂದ ಗ್ರಾ.ಪಂ ಗೆ ಮನವಿ ನೀಡಲಾಗಿದ್ದು ಹೋರಿಗಳು ತೊಂದರೆ ನೀಡುತ್ತಿದ್ದು ಕ್ರಮ ಕೈಗೊಳ್ಳುವಂತೆ ಮನವಿ ನೀಡಿದ್ದು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

You may also like

Leave a Comment