3
ಕೊರೊನಾ ಮೂರನೆ ಅಲೆ ಕಡಿಮೆಯಾಗುತ್ತಿರುವ ಸಮಯದಲ್ಲೇ ಮತ್ತೊಂದು ಆತಂಕದ ಸುದ್ದಿ ಬಂದಿದೆ. ಕೊರೊನಾ ನಾಲ್ಕನೇ ಅಲೆ ಜೂನ್ ನಲ್ಲಿ ಬರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ನಾಲ್ಕನೆಯ ಅಲೆಯಲ್ಲಿ ರೂಪಾಂತರವಾಗುವ ತಳಿಗಳು, ಅವುಗಳ ತೀವ್ರತೆ, ಲಸಿಕೆ ವಿತರಣೆಯ ಸ್ಥಿತಿಗತಿ ಮೊದಲಾದವುಗಳನ್ನು ಆಧರಿಸಿ 4 ನೇ ಅಲೆ ಪರಿಣಾಮ ಉಂಟಾಗಲಿದೆ ಎನ್ನಲಾಗಿದೆ.
ಭಾರತದಲ್ಲಿ ಜೂನ್ ಮಧ್ಯದಿಂದ ಅಂತ್ಯದವರೆಗೆ ನಾಲ್ಕನೇ ಕೋವಿಡ್ ತರಂಗಕ್ಕೆ ಸಾಕ್ಷಿಯಾಗಲಿದೆ. ಹಾಗೂ ಇದು ಸುಮಾರು 4 ತಿಂಗಳವರೆಗೆ ಮುಂದುವರಿಯಲಿದೆ ಎಂದು ಐಐಟಿ ಕಾನ್ಪುರದ ವಿಜ್ಞಾನಿಗಳ ತಂಡವು ಇತ್ತೀಚಿನ ಅಧ್ಯಯನ ತಂಡವು ಹೇಳಿದೆ.
