Home » ಮತ್ತೆ ಗರಿಗೆದರಿದ ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ | ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ ಸ್ವಂತ ವೆಚ್ಚದಲ್ಲಿ ಒಂದು ಟನ್ ಬಿಸಿ ಬಿಸಿ ಚಿಕನ್ ಕಬಾಬ್ ವಿತರಿಸಿದ ವ್ಯಕ್ತಿ !!

ಮತ್ತೆ ಗರಿಗೆದರಿದ ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ | ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ ಸ್ವಂತ ವೆಚ್ಚದಲ್ಲಿ ಒಂದು ಟನ್ ಬಿಸಿ ಬಿಸಿ ಚಿಕನ್ ಕಬಾಬ್ ವಿತರಿಸಿದ ವ್ಯಕ್ತಿ !!

0 comments

ಅರ್ಧದಲ್ಲೇ ಮೊಟಕುಗೊಂಡಿದ್ದ ಕಾಂಗ್ರೆಸ್ ನ‌ ಮೇಕೆದಾಟು ಪಾದಯಾತ್ರೆ ಮತ್ತೆ ಗರಿಗೆದರಿದೆ. ಪಾದಯಾತ್ರೆಗೆ ಕಾಂಗ್ರೆಸ್ ಕಾರ್ಯಕರ್ತರು ದುಡ್ಡಿನ ಹೊಳೆಯೇ ಸುರಿಸಿದಂತೆ ಕಾಣುತ್ತಿದೆ. ಮೇಕೆದಾಟು 2.0 ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಸಂಖ್ಯೆಯ ಜನರಿಗೆ ಸಿದ್ಧವಾಗಿದ್ದ ಭೂರಿ ಭೋಜನವೇ ಪಾದಯಾತ್ರೆಯ ಹೈಲೈಟ್ ಆಗಿತ್ತು !!

ಹೌದು. ಪಾದಯಾತ್ರೆಗೆ ನೆರದಿದ್ದ ಜನರ ಹಸಿವು ನೀಗಿಸಲು ಸ್ವಂತ ದುಡ್ಡಿನಿಂದ ಒಂದು ಟನ್ ಕಬಾಬ್ ವಿತರಣೆ ಮಾಡುತ್ತಿದ್ದ ವ್ಯಕ್ತಿಯ ದೃಶ್ಯ ಇದೀಗ ವೈರಲ್ ಆಗಿದೆ. ಸ್ವಂತ ವೆಚ್ಚದಲ್ಲಿ ಕಬಾಬ್ ತಯಾರಿಸಿದ್ದ ವಾಸಿಲ್, “ಈ ಪಾದಯಾತ್ರೆಯಲ್ಲಿ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದಾರೆ. ಅವರಿಗೆ ನಾವು ಚಿಕನ್ ಕಬಾಬ್ ನೀಡುವ ಮೂಲಕ ಈ ಮೇಕೆದಾಟು ಯಾತ್ರೆಗೆ ನಮ್ಮ ಸೇವೆ ನೀಡುತ್ತಿದ್ದೇವೆ” ಎಂದು ಹೇಳಿದ್ದಾರೆ.

ಈ ರೀತಿ ಪಾದಯಾತ್ರೆಯುದ್ದಕ್ಕೂ ಅನೇಕ ಸ್ಥಳಗಳಲ್ಲಿ ಎಳನೀರು, ಹಣ್ಣುಗಳು, ಮಜ್ಜಿಗೆಗಳನ್ನು ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಜನರಿಗೆ ವಿತರಿಸುತ್ತಿದ್ದದ್ದು ಕಂಡುಬಂತು. ಅಂತೂ ಇಂತೂ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರಿಗೆ ಹಸಿವು ನೀಗಿಸುವ ಕಾರ್ಯವಂತೂ ಭರದಿಂದ ಸಾಗಿತು. ಈ ರೀತಿಯ ಭೋಜನಕ್ಕೆ ಆಸೆಪಟ್ಟೇ ಅಷ್ಟೊಂದು ಜನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ಎಂಬ ಮಾತು ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿದೆ.

You may also like

Leave a Comment