Home » ಬಂಟ್ವಾಳ : ಬಿಲ್ ಪಾವತಿ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗ್ರಾ.ಪಂ.ಸದಸ್ಯನ ಮೇಲೆ ಅಧ್ಯಕ್ಷ ನಿಂದ ಹಲ್ಲೆ!!!

ಬಂಟ್ವಾಳ : ಬಿಲ್ ಪಾವತಿ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗ್ರಾ.ಪಂ.ಸದಸ್ಯನ ಮೇಲೆ ಅಧ್ಯಕ್ಷ ನಿಂದ ಹಲ್ಲೆ!!!

0 comments

ಬಂಟ್ವಾಳ : ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಗ್ರಾ.ಪಂ.ಸದಸ್ಯನ ಮೇಲೆ ಅಧ್ಯಕ್ಷ ಹಲ್ಲೆ ನಡೆಸಲು ಮುಂದಾಗಿದ್ದಲ್ಲದೇ ಚೂರಿ ಇರಿಯಲು ಕೂಡಾ ಪ್ರಯತ್ನಿಸಿದ ಘಟನೆ ಗ್ರಾ.ಪಂ.ಸಭಾಂಗಣದೊಳಗೆ ನಡೆದಿದೆ.

ನಾವೂರ ಗ್ರಾ.ಪಂ.ಸದಸ್ಯ ಜನಾರ್ಧನ ಎಂಬುವವರ ಮೇಲೆ ಗ್ರಾ.ಪಂ.ಅಧ್ಯಕ್ಷ ಉಮೇಶ್ ಕುಲಾಲ್ ಅವರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾಮಗಾರಿ ವಿಷಯಕ್ಕೆ ಸಂಬಂಧಿಸಿದಂತೆ ಬಿಲ್ ಪಾವತಿ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಈ ರೀತಿ ಮಾಡಲು ಮುಂದಾಗಿದ್ದಾರೆ. ಸದಸ್ಯರ ಮಧ್ಯ ಪ್ರವೇಶದಿಂದ ಚೂರಿ ಇರಿತದಿಂದ ಬಚಾವ್ ಆಗಿದ್ದೇನೆ ಎಂದು ಹಲ್ಲೆಗೊಳಗಾದ ಸದಸ್ಯ ಜನಾರ್ಧನ ತಿಳಿಸಿದ್ದಾರೆ.

ಗಾಯಗೊಂಡ ಸದಸ್ಯ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment