Home » ಉಕ್ರೇನ್ ಟಿವಿ ಟವರ್ ಮೇಲೆ ರಷ್ಯಾ ದಾಳಿ; ಸ್ಥಗಿತಗೊಂಡ ಚಾನಲ್

ಉಕ್ರೇನ್ ಟಿವಿ ಟವರ್ ಮೇಲೆ ರಷ್ಯಾ ದಾಳಿ; ಸ್ಥಗಿತಗೊಂಡ ಚಾನಲ್

0 comments

ರಷ್ಯಾ  ಹಾಗೂ ಉಕ್ರೇನ್  ನಡುವಿನ ಯುದ್ಧ  ಜೋರಾಗುತ್ತಿದೆ. ಉಕ್ರೇನ್‌ ಮೇಲಿನ ತನ್ನ ದಾಳಿಯನ್ನು  ರಷ್ಯಾ ಇನ್ನಷ್ಟು ತೀವ್ರಗೊಳಿಸಿದೆ

ರಾಷ್ಯ ಸೈನಿಕರು ಉಕ್ರೇನ್ ರಾಜಧಾನಿ ಕೀವ್ ನಲ್ಲಿರುವ ಟೀವಿ ಟವರ್ ಮೇಲೆ ಬಾಂಬ್ ದಾಳಿ ನಡೆಸಿದೆ. ಹಾಗಾಗಿ ಉಕ್ರೇನ್ ರಾಜಧಾನಿಯಿಂದ ಪ್ರಸಾರವಾಗುತ್ತಿದ್ದ ಎಲ್ಲಾ ಟಿವಿ ಚಾನೆಲ್ ಪ್ರಸಾರ ನಿಲ್ಲಿಸಿವೆ. ಯಾವುದೇ ಸುದ್ದಿ ವಾಹಿನಿಗಳು ಪ್ರಸಾರವಾಗುವುದಿಲ್ಲ ಎಂದು ತಿಳಿದು ಬಂದಿದೆ.

ಟಿವಿ ಚಾನೆಲ್ ಮೇಲೆ ದಾಳಿ ನಡೆಸಿ ಯುದ್ಧದ ಪರಿಸ್ಥಿತಿ ಬಗ್ಗೆ ಮಾಹಿತಿ ಹೊರಗೆ ಹೋಗದಂತೆ ನೋಡಿಕೊಂಡಿದೆ. ಈ ದಾಳಿಯಲ್ಲಿ ಐವರು ಮೃತಪಟ್ಟಿದ್ದಾಗಿ ವರದಿಯಾಗಿದೆ. ಅಲ್ಲದೇ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಉಕ್ರೇನ್​​ನ ಎರಡನೇ ದೊಡ್ಡ ನಗರವಾದ ಖಾರ್ಕಿವ್​​ನಲ್ಲಿ ರಷ್ಯಾ ನಿರಂತರವಾಗಿ ಶೆಲ್ ಹಾಗೂ  ರಾಕೆಟ್​​ ದಾಳಿ ನಡೆಸಿದೆ. ಅದರಲ್ಲಿ ಸುಮಾರು 11 ಮಂದಿ ಮೃತಪಟ್ಟಿದ್ದಾರೆ. 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.‌

You may also like

Leave a Comment