Home » ಆಗ ಬಸ್ಕಿ…ಈಗ ಮಸಾಜ್| ಬಿಜೆಪಿ ಶಾಸಕರೊಬ್ಬರ ಕಾಲಿಗೆ ಮಸಾಜ್ ಮಾಡೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್!

ಆಗ ಬಸ್ಕಿ…ಈಗ ಮಸಾಜ್| ಬಿಜೆಪಿ ಶಾಸಕರೊಬ್ಬರ ಕಾಲಿಗೆ ಮಸಾಜ್ ಮಾಡೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್!

0 comments

ವೃದ್ಧರೊಬ್ಬರ ಕಾಲಿಗೆ ಮಸಾಜ್ ಮಾಡತ್ತಿರುವ ಬಿಜೆಪಿ ಶಾಸಕನ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಉತ್ತರ ಪ್ರದೇಶದ ರಾಬರ್ಟ್ಸ್ ಗಂಜ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಿಜೆಪಿ ಶಾಸಕ ಭೂಪೇಶ್ ಚೌಬೆ ಈ ಕೆಲಸ ಮಾಡಿದವರು. ಈ ರೀತಿ ಮಸಾಜ್ ಮಾಡಿದ್ದನ್ನು ನೋಡಿ ಬೆಂಬಲಿಗರು ಹಾಗೂ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

ಚೌಬೆ ಅವರು ಈ ಹಿಂದೆ ಇಂತಹುದೇ ಒಂದು ಕಾರಣಕ್ಕೆ ಸುದ್ದಿಯಾಗಿದ್ದರು. ಚುನಾವಣಾ ಪ್ರಚಾರ ಸಭೆಯಲ್ಲಿ ಬಸ್ಕಿ ಹೊಡೆದಿದ್ದರು. ನಂತರ ಕಳೆದ ಐದು ವರ್ಷದಲ್ಲಿ ಏನಾದರೂ ತಪ್ಪು ಮಾಡಿದ್ದರೆ ನನ್ನನ್ನು ಕ್ಷಮಿಸಿ ಎಂದು ಹೇಳಿದ್ದರು.

ಈಗ ಮತ್ತೊಂದು ಪರಿ…ಈ ಬಾರಿಯ ಚುನಾವಣೆಯಲ್ಲಿ ಆಯ್ಕೆಯಾಗುವುದಿಲ್ಲ ಎಂದು ಚೌಬೆಯವರಿಗೆ ಅರ್ಥವಾಗಿರಬೇಕು ಅದಕ್ಕೆ ಜನರನ್ನು ಸೆಳೆಯಲು ಈ ತಂತ್ರ ಮಾಡಿದ್ದಾರೆಂದು ಅನಿಸುತ್ತದೆ. ಎಂದು ಪ್ರತಿಪಕ್ಷ ತರಾಟೆಗೆ ತೆಗೆದುಕೊಂಡಿದೆ. ಆದರೆ ಪ್ರತಿಪಕ್ಷಗಳ ಆರೋಪಕಕ್ಕೆ ತಿರುಗೇಟು ನೀಡಿರುವ ಚೌಬೆ, ‘ ಮತದಾರರು ದೇವರಿದ್ದಂತೆ. ಹೀಗಾಗಿ ಅವರ ಮನವೊಲಿಸುವಲ್ಲಿ ತಪ್ಪೇನಿಲ್ಲ ‘ ಎಂದಿದ್ದಾರೆ.

You may also like

Leave a Comment