ಕಾಣಿಯೂರು: ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಅಂಗ ಸಂಸ್ಥೆಯಾಗಿ 25 ವರ್ಷಗಳ ಹಿಂದೆ ಸ್ಥಾಪನೆಗೊಂಡಿರುವ ಯುವಕ ಮಂಡಲವು
ಗ್ರಾಮೀಣ ಭಾಗದ ಯುವಕರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ರಾಧಾಕೃಷ್ಣಗೌಡ ಪೆರ್ಲೋಡಿ ಹೇಳಿದರು.ಅವರು ಸ.ಹಿ.ಪ್ರಾ.ಶಾಲೆ ಕಾಣಿಯೂರು ಇಲ್ಲಿ ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ 25 ನೇ ವರ್ಷಾಚರಣೆಯ ಬೆಳ್ಳಿಹಬ್ಬದ ಉದ್ಘಾಟನೆ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ರಕ್ತದಾನದ ಮಹತ್ವವನ್ನು ವಿವರಿಸಿ ಮಾತನಾಡಿದು.ವೇದಿಕೆಯಲ್ಲಿ ಸ.ಹಿ.ಪ್ರಾ.ಶಾಲಾ ಮುಖ್ಯಗುರು ಪುಂಡಲೀಕ ಪೂಜಾರ್, ಕಡಬ ತಾಲೂಕು ಯುವಜನ ಒಕ್ಕೂಟದ ಕೋಶಾಧಿಕಾರಿ ಸುಧಾಕರ ಆಚಾರ್ಯ ಕಾಣಿಯೂರು, ಶ್ರೀಕ್ಷೇತ್ರ ಧ.ಗ್ರಾ.ಯೋಜನೆ ಬಿ ಒಕ್ಕೂಟ ಕಾಣಿಯೂರು ಇದರ ಅಧ್ಯಕ್ಷ ದಿನೇಶ್ ಮುಗರಂಜ,ಕಣ್ವರ್ಷಿ ಅಟೋರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಪ್ರವೀಣ್ ಕೋಳಿಗದ್ದೆ ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ ಸುರೇಶ್ ಓಡಬಾಯಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು,ಕಾರ್ಯದರ್ಶಿ ವಿನಯ್ ಎಲುವೆ ವಂದಿಸಿದರು.
ಪುನೀತ್ ಕಲ್ಪಡ,ಮೋಹನ್ ಪೆರ್ಲೋಡಿ, ರಚನ್ ಬರಮೇಲು,ರಾಜೇಶ್ ಮೀಜೆ,ಜಗದೀಶ್ ಪೆರ್ಲೋಡಿ, ಕೀರ್ತಿಕುಮಾರ್ ಎಲುವೆ,ಕೇಶವ ಕಾಣಿಯೂರು ಅತಿಥಿಗಳನ್ನು ಹೂಗುಚ್ಚ ನೀಡಿ ಗೌರವಿಸಿದರು.ಕಿಶನ್ ಓಡಬಾಯಿ, ಅನ್ವಿತ್ ಮಾದೋಡಿ,ಜೀವನ್, ಕೀರ್ತಿ,ನಿರೀಕ್ಷಾ,ಮನ್ಮಿತಾ ಪ್ರಾರ್ಥಿಸಿದರು. ತಾ.ಪಂ.ಮಾಜಿ ಉಪಾಧ್ಯಕ್ಷ ಬಾಬು ಮಾದೋಡಿ ಕಾರ್ಯಕ್ರಮ ನಿರೂಪಿಸಿದರು.
