Home » ಪ್ರಿಯಕರನ ತಲೆ ಕತ್ತರಿಸಿ ಬಕೆಟ್‌ನಲ್ಲಿಟ್ಟ ಪ್ರಿಯತಮೆ | ಡ್ರಗ್ಸ್ ಸೇವಿಸಿ ಸೆಕ್ಸ್ ಬಳಿಕ ಕೃತ್ಯ

ಪ್ರಿಯಕರನ ತಲೆ ಕತ್ತರಿಸಿ ಬಕೆಟ್‌ನಲ್ಲಿಟ್ಟ ಪ್ರಿಯತಮೆ | ಡ್ರಗ್ಸ್ ಸೇವಿಸಿ ಸೆಕ್ಸ್ ಬಳಿಕ ಕೃತ್ಯ

by Praveen Chennavara
0 comments

ಯುವತಿಯೊಬ್ಬಳು ಡ್ರಗ್ ಅಮಲಿನಲ್ಲಿ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ತನ್ನ ಪ್ರಿಯಕರನ ಹತ್ಯೆಗೈದು, ಆತನ ತಲೆ ಕತ್ತರಿಸಿರುವ ಭೀಕರ ಘಟನೆ ಅಮೆರಿಕದ ವಿಸ್ಕಾನ್ಸಿನ್ ಪ್ರದೇಶದಲ್ಲಿ ನಡೆದಿದೆ.ಯುವತಿ ತನ್ನ ಪ್ರಿಯಕಾರನಾದ ಯುವಕನ ಕೊರಳಿಗೆ ಕಬ್ಬಿಣದ ಚೈನ್ ಬಿಗಿದು, ಬಳಿಕ ಆತನ ದೇಹವನ್ನು ತುಂಡು ತುಂಡಾಗಿಸಿ ಕತ್ತರಿಸಿ ಎಲ್ಲೆಂದರಲ್ಲಿ ಎಸೆದಿದ್ದಾಳೆ.

ಘಟನೆ ಸಂಬಂದ 24 ವರ್ಷದ ಯುವತಿ ಗ್ರೀನ್ ಬೇ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಡ್ರಗ್ಸ್ ಸೇವಿಸಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಬಳಿಕ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಈ ವೇಳೆ ಯುವತಿ ಯುವಕನ ಕುತ್ತಿಗೆಗೆ ಸರಪಳಿ ಬಿಗಿದು ಹತ್ಯೆ ಮಾಡಿ, ತಲೆ ಕಡಿದು ಅದನ್ನು ಬಕೆಟ್‌ನಲ್ಲಿ ಹಾಕಿ ವಿಕೃತಿ ಮೆರೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment