Home » ಮಸೀದಿಯಲ್ಲಿ ಭೀಕರ ಬಾಂಬ್ ಸ್ಫೋಟ | 30 ಕ್ಕೂ ಹೆಚ್ಚು ಜನರ ದುರ್ಮರಣ

ಮಸೀದಿಯಲ್ಲಿ ಭೀಕರ ಬಾಂಬ್ ಸ್ಫೋಟ | 30 ಕ್ಕೂ ಹೆಚ್ಚು ಜನರ ದುರ್ಮರಣ

0 comments

ಮಸೀದಿಯೊಂದರಲ್ಲಿ ಭೀಕರ ಬಾಂಬ್ ಸ್ಫೋಟವಾದ ಪರಿಣಾಮ ಕನಿಷ್ಠ 30 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಘಟನೆ ಪಾಕಿಸ್ತಾನದ ಪೇಶಾವರದಲ್ಲಿ ನಡೆದಿದೆ. ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆಯಲ್ಲಿ ಮಸೀದಿಯೊಳಗೆ ಪ್ರಬಲ ಸ್ಫೋಟ ಸಂಭವಿಸಿದೆ. ಕ್ವಿಸ್ಸಾ ಖ್ವಾನಿ ಬಜಾರ್ ಪ್ರದೇಶದ ಜಾಮಿಯಾ ಮಸೀದಿಯಲ್ಲಿ‌ ಮುಸ್ಲಿಮರು ಶುಕ್ರವಾರ ಪ್ರಾರ್ಥನೆ ಸಲ್ಲಿಸುತ್ತಿದ್ದ ಸಮಯದಲ್ಲಿ ಈ ಸ್ಫೋಟ ಸಂಭವಿಸಿದೆ.

ಇಬ್ಬರು ದಾಳಿಕೋರರು ಮಸೀದಿ ಪ್ರವೇಶಕ್ಕೆ ಯತ್ನಿಸಿದಾಗ ಅವರನ್ನು ತಡೆಯಲು ಹೋದಾಗ ದಾಳಿಕೋರರು ಮಸೀದಿ ಕಾಯುತ್ತಿದ್ದ ಗಾರ್ಡ್ ಗೆ ಗುಂಡಿಕ್ಕಿದ್ದಾರೆ. ಇದರಿಂದ ಗುಂಡಿನ ದಾಳಿಗೆ ಓರ್ವ ಗಾರ್ಡ್ ಬಲಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 50 ಕ್ಕೂ ಹೆಚ್ಚು ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

You may also like

Leave a Comment