Home » ತಾತನ ತೀರದ ತೀಟೆ ಪುರಾಣ | ಹೆಣ್ಣುಮಕ್ಕಳ ಸಂಗಕ್ಕಾಗಿ ಈತ ಮಾಡುತ್ತಿದ್ದ ಖತರ್ನಾಕ್ ಪ್ಲ್ಯಾನ್!

ತಾತನ ತೀರದ ತೀಟೆ ಪುರಾಣ | ಹೆಣ್ಣುಮಕ್ಕಳ ಸಂಗಕ್ಕಾಗಿ ಈತ ಮಾಡುತ್ತಿದ್ದ ಖತರ್ನಾಕ್ ಪ್ಲ್ಯಾನ್!

0 comments

ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೇ…ಅಂತ ಒಂದು ಗಾದೆ ಮಾತಿದೆ. ಅದಕ್ಕೆ ತಕ್ಕಂತೆ ಇಲ್ಲೊಂದು ಘಟನೆ ನಡೆದಿದೆ. ಇದೊಂದು ಕಥೆ ತಾತಪ್ಪನದ್ದು. ಹೆಣ್ಣು ಮಕ್ಕಳ ಚಟಕ್ಕೆ ಬಿದ್ದು ಕಳ್ಳತನಕ್ಕೆ ಇಳಿದಿದ್ದ ಈ ತಾತಪ್ಪ.

ರಮೇಶ್ ( 70) ಬಂಧಿತ ವೃದ್ಧ. ಸಿಸಿಟಿವಿ ಆಧರಿಸಿ ವೃದ್ಧನ ಬಂಧನ ಮಾಡಲಾಗಿತ್ತು. ಬಳಿಕ ವಿಚಾರಣೆ ನಂತರ ಈತನ ಹೆಣ್ಣು ಮಕ್ಕಳ ಚಟ ಬಯಲಿಗೆ ಬಂದಿದೆ.

ಎರಡು ಮದುವೆ, ಮೂರು ಮಕ್ಕಳಾದರೂ ಈತನ ಆಸೆಯೇನೂ ಕಡಿಮೆಯಾಗಿಲ್ಲ.

ಹೆಣ್ಣುಮಕ್ಕಳ ಚಟ ಹೊಂದಿದ ಈ ತಾತ ಮನೆಯಲ್ಲಿ ಹಣ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಈ ಕಳ್ಳತನಕ್ಕೆ ಇಳಿದಿದ್ದ. ಮೂಲತಃ ಚಿಕ್ಕಮಗಳೂರಿನ ರಮೇಶ್ ಕಳೆದ 12 ವರ್ಷಗಳ ಹಿಂದೆ ಮನೆಯ ಮನೆಯ ತೊರೆದು ತಮಿಳುನಾಡಿಗೆ ತೆರಳಿದ್ದ. ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಬಂದ ಹಣದಲ್ಲಿ ವ್ಯಾಮೋಹ ತೀರಿಸಿಕೊಳ್ಳುತ್ತಿದ್ದ.
ಆದರೆ ಯಾವಾಗ ತಮಿಳುನಾಡು ಪೊಲೀಸರು ಬಂಧಿಸಿದರೋ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬೆಂಗಳೂರು ಸೇರಿದ್ದ.

ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮನೆಗಳ್ಳತನ ಶುರು ಹಚ್ಚಿಕೊಂಡಿದ್ದ. ಸದ್ದುಗುಂಟೆ ಪಾಳ್ಯ ಹಾಗೂ ಮೈಕೋಲೇಔಟ್ ಠಾಣೆಗಳಲ್ಲಿ ಪ್ರತ್ಯೇಕ ಕಳ್ಳತನ ಮಾಡಿದ್ದ. ಸಿಸಿಟಿವಿ ಆಧರಿಸಿ ಆರೋಪಿ ಬಂಧಿಸಿರುವ ಸದ್ದುಗುಂಟೆ ಪೊಲೀಸರು ಈ ತಾತನಿಂದ 170 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

You may also like

Leave a Comment