Home » ಗ್ರಾ.ಪಂ.ಕಛೇರಿಯಲ್ಲಿ ಪಿಡಿಓ ಹಾಗೂ ಗ್ರಾ.ಪಂ.ಸದಸ್ಯನ ನಡುವೆ ಹೊಡೆದಾಟ

ಗ್ರಾ.ಪಂ.ಕಛೇರಿಯಲ್ಲಿ ಪಿಡಿಓ ಹಾಗೂ ಗ್ರಾ.ಪಂ.ಸದಸ್ಯನ ನಡುವೆ ಹೊಡೆದಾಟ

by Praveen Chennavara
0 comments

ಗ್ರಾ.ಪಂ ಪಿಡಿಒ ಹಾಗೂ ಗ್ರಾ.ಪಂ. ಸದಸ್ಯರೊಬ್ಬರ ನಡುವೆ ಹೊಡೆದಾಟ ನಡೆದಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದಿದೆ.

ಪಿಡಿಒ ಮಹೇಶ್ ಮತ್ತು ಗ್ರಾ.ಪಂ. ಸದಸ್ಯ ಯೋಗೇಶ್ ಪರಸ್ಪರ ಹೊಡೆದಾಡಿಕೊಂಡಿದ್ದು, ಹಲ್ಲೆ ದೃಶ್ಯ ಅಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಅಭಿವೃದ್ಧಿ ವಿಚಾರವಾಗಿ ಇಬ್ಬರ ನಡುವೆ ಕಾವೇರಿದ ಮಾತಿನ ಚಕಮಕಿ ನಡೆಯಿತು.

ಅದು ವಿಕೋಪಕ್ಕೆ ತೆರಳಿದಾಗ ಇಬ್ಬರು ಕೂಡ ಪಂಚಾಯಿತಿ ಕಚೇರಿ ಒಳಾವರಣ ಹಾಗೂ ಹೊರಾವರಣದಲ್ಲಿ ಸಿನಿಮಾ ಮಾದರಿಯಲ್ಲಿ ಹೊಡೆದಾಟ ನಡೆಸಿದರು.

ಕೊನೆಗೆ ಸ್ಥಳದಲ್ಲಿದ್ದವರು, ಮಧ್ಯ ಪ್ರವೇಶಿಸಿ, ಹೊಡೆದಾಟ ನಿಲ್ಲಿಸಿ, ಇಬ್ಬರನ್ನು ಸಮಾಧಾನಪಡಿಸಿದರು. ಹೊಡೆದಾಟದ ಬಗ್ಗೆ ಹೆಚ್.ಡಿ.ಕೋಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

You may also like

Leave a Comment