Home » ನಿರ್ಮಾಣ ಹಂತದಲ್ಲಿರೋ ನಾಲ್ಕು ಅಂತಸ್ತಿನ ಕಟ್ಟಡಲ್ಲಿ ಅಗ್ನಿ ದುರಂತ!

ನಿರ್ಮಾಣ ಹಂತದಲ್ಲಿರೋ ನಾಲ್ಕು ಅಂತಸ್ತಿನ ಕಟ್ಟಡಲ್ಲಿ ಅಗ್ನಿ ದುರಂತ!

0 comments

ಬೆಂಗಳೂರು: ನಾಲ್ಕು ಅಂತಸ್ತಿನ ಕಟ್ಟಡಲ್ಲಿ ಅಗ್ನಿ ದುರಂತ ಸಂಭವಿಸಿದ ಘಟನೆ ಮಾರತ್‌ಹಳ್ಳಿ ಸಾಫ್ಟ್‌ವೇರ್ ಕಟ್ಟಡದಲ್ಲಿ ನಿನ್ನೆ ರಾತ್ರಿ10 ಗಂಟೆ ಸುಮಾರಿಗೆ ನಡೆದಿದೆ.

ಮಾರತ್ತಹಳ್ಳಿಯ ಕಾರ್ತಿಕ್ ನಗರದಲ್ಲಿರುವ ಟೆಕ್ ಪಾರ್ಕ್‌ನ ನಿರ್ಮಾಣ ಹಂತದಲ್ಲಿರೋ ಕಟ್ಟಡಕ್ಕೆ ಬೆಂಕಿ ತಗುಲಿದ್ದು,ಪರಿಣಾಮ ಕಟ್ಟಡದ ಒಳಭಾಗ ಹೊತ್ತಿ ಉರಿದಿದೆ.ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರಬಹುದು ಎಂದು ಸ್ಥಳೀಯರು ಹೇಳಿದ್ದು,ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ 8 ಅಗ್ನಿಶಾಮಕ ವಾಹನ ಬಂದು ಅಗ್ನಿ ನಂದಿಸುವ ಕಾರ್ಯ ನಡೆಸಿದೆ.

You may also like

Leave a Comment